

ಗಂಗೊಳ್ಳಿ: ಪ್ರಯತ್ನ ಮತ್ತು ದೇವರ ಅನುಗ್ರಹವಿದ್ದರೆ ಎಂತಹ ಸಾಧನೆ ಕೂಡ ವಾಡಬಹುದು ಎಂದು ಭಗಿನಿ ಗ್ರೇಸಿ ಲೋಬೊ ಹೇಳಿದರು.
ಮಂಗಳವಾರ ಗಂಗೊಳ್ಳಿಯ ಸ್ಟೆಲ್ಲಾ ವಾರಿಸ್ ಪ್ರೌಢಶಾಲೆ ಕನ್ನಡ ವಾಧ್ಯಮ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು. ಶಾಲೆಯ ಎಲ್ಲ ಹೊಸ ವಿದ್ಯಾರ್ಥಿಗಳಿಗೆ ಸ್ಮೈಲ್ ಬಾಲ್ ನೀಡಿ ಸ್ವಾಗತಿಸಲಾಯಿತು. ಉಚಿತ ಬ್ಯಾಗ್, ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಭಗಿನಿ ಕ್ರಸೆನ್ಸ್, ಸಹಾಯಕ ಮುಖ್ಯ ಶಿಕ್ಷಕಿ ಭಗಿನಿ ಆನೆಟ್, ಶಿಕ್ಷಕ ಹಾಗೂ ಶಿಕ್ಷಕೇತರರು ಉಪಸ್ಥಿತರಿದ್ದರು. ಶಿಕ್ಷಕ ಗಣೇಶ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.