

ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ಶಾರದ ಮಂಟಪದಲ್ಲಿ ನಡೆದ ಗಂಗೊಳ್ಳಿ ವಲಯ ಸವಿತಾ ಸವಾಜ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ವಾಡಲಾಯಿತು.
ಅಧ್ಯಕ್ಷರಾಗಿ ಪ್ರಸನ್ನ ಸಾಲಿಯಾನ್ ಗಂಗೊಳ್ಳಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಶೇಖರ ಸುವರ್ಣ ಬಂಟ್ವಾಡಿ, ಕಾರ್ಯದರ್ಶಿಯಾಗಿ ರಮೇಶ ಭಂಡಾರಿ ಗಂಗೊಳ್ಳಿ, ಉಪಾಧ್ಯಕ್ಷರಾಗಿ ರವಿ ಭಂಡಾರಿ ನಾಡ, ಕೋಶಾಧಿಕಾರಿಯಾಗಿ ಸಂದೀಪ್ ಮರವಂತೆ, ಸಂಟನಾ ಕಾರ್ಯದರ್ಶಿ ಲಕ್ಷ್ಮಣ ಸುವರ್ಣ ಮರವಂತೆ, ಜೊತೆ ಕಾರ್ಯದರ್ಶಿ ಸುಧಾಕರ ಗಂಗೊಳ್ಳಿ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್ ಹೆವ್ಮಾಡಿ ಮತ್ತು ಮಹೇಶ್ ಹೆವ್ಮಾಡಿ ಆಯ್ಕೆಯಾದರು.
ಕುಂದಾಪುರ ತಾಲೂಕು ಸವಿತಾ ಸವಾಜ ಅಧ್ಯಕ್ಷ ಮಧುಕರ ಭಂಡಾರಿ ಕೋಟೇಶ್ವರ, ಗಂಗೊಳ್ಳಿ ವಲಯ ಅಧ್ಯಕ್ಷ ಶೇಖರ ಸುವರ್ಣ ಬಂಟ್ವಾಡಿ, ಕುಂದಾಪುರ ಸಿಟಿ ವಲಯ ಕಾರ್ಯದರ್ಶಿ ಚಂದ್ರ ಭಂಡಾರಿ ಹಕ್ಲಾಡಿ ಉಪಸ್ಥಿತರಿದ್ದರು.