

ಬೆಳ್ತಂಗಡಿ: ಬೆನ್ನುಮೂಳೆಯ ಸಾಮರ್ಥ್ಯದ ಮೇಲೆ ಮನುಷ್ಯನ ದೈಹಿಕ ಕ್ಷಮತೆ ಅವಲಂಬಿತವಾಗಿರುತ್ತದೆ. ಸದೃಢ ಎಲುಬು ಮತ್ತು ಮೂಳೆಗಳಿಂದ ದೇಹವೂ ಸದೃಢವಾಗಿರುತ್ತದೆ. ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಮೂಳೆ ಸಾಂದ್ರತೆ ತಪಾಸಣೆಗೊಳಪಡಬೇಕು ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಕೆ ಹೇಳಿದರು.
ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬೆನಕ ಆಸ್ಪತ್ರೆಯ ಎಲುಬು ಕೀಲು ತಜ್ಞರು ಮತ್ತು ಕೈಮೈಕ್ರೋ ಸರ್ಜರಿ ಪರಿಣತ ಡಾ.ರೋಹಿತ್ ಕೆ. ಅವರು ಆರೋಗ್ಯದ ಮೇಲೆ ಮೂಳೆ ಸಾಂದ್ರತೆ ಉಂಟುಮಾಡುವ ಪರಿಣಾಮದ ಕುರಿತು ವಿವರಿಸಿದರು. ಎಸ್.ಜಿ ಭಟ್ ಸ್ವಾಗತಿಸಿದರು. ಡಾ.ಭಾರತಿ ಜಿ.ಕೆ ವಂದಿಸಿದರು.