ಮೂಡುಬಿದಿರೆ ಮೈನ್ ಶಾಲೆಯಲ್ಲಿ ಕೊಠಡಿ ಉದ್ಘಾಟನೆ

New Project (22)
Published on

ಮೂಡುಬಿದಿರೆ: ಮೈನ್ ದ.ಕ. ಜಿಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಶಾಲಾ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ಮಂಗಳವಾರ ಉದ್ಘಾಟಿಸಿದರು.

ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ, ಈ ಶಾಲೆಗೆ ಇನ್ನೂ ಮೂರು ಕೊಠಡಿಗಳ ಅಗತ್ಯವಿದ್ದು, ಅದಕ್ಕೆ ಬೇಕಾಗಿರುವ ಅನುದಾನವನ್ನು ಶಾಸಕರಿಗೆ ಸರ್ಕಾರದಿಂದ ನೀಡುವಂತೆ ಮನವಿ ಮಾಡಿದರು.

ಶಾಸಕ ಕೋಟ್ಯಾನ್ ಮನವಿಗೆ ಸ್ಪಂದಿಸಿ ಮಾತನಾಡಿ, ಸಚಿವರಲ್ಲಿ ಈಗಾಗಲೇ ತಾಲೂಕಿನ ವಿವಿಧ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದ್ದು, ಕೊಠಡಿ ನಿರ್ಮಿಸಲು ಅನುದಾನ ಕೇಳಿದ್ದೇನೆ. ಅನುದಾನ ಮಂಜೂರಾದರೆ ಮೈನ್ ಶಾಲೆಗೆ ಹೆಚ್ಚುವರಿ ಕೊಠಡಿ ನೀಡುವುದಾಗಿ ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಜಯಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸ್ಥಳದಾನಿಗಳ ವಂಶಸ್ಥರಾದ ಚೌಟರ ಅರಮನೆಯ ಕುಲದೀಪ ಎಂ.ಚೌಟ, ಪುರಸಭಾ ಸದಸ್ಯೆ ಶಕುಂತಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್., ಮಂಗಳೂರು ಪಂಚಾಯತ್ ರಾಜ್ ಉಪವಿಭಾಗದ ರಾಯ್ ರೊಡ್ರಿಗ್ರಸ್, ಲಕ್ಷಣ ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಶ್ ಶೆಣೈಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net