ವಾಟ್ಸಾಪ್ ಸಂದೇಶದಿಂದ ಲಕ್ಷಾಂತರ ರೂ. ವಂಚನೆ

Huge Fraud

ಕಾರ್ಕಳ: ವಾಟ್ಸಾಪ್‌ಗೆ ಬಂದ ಸಂದೇಶ ನಂಬಿ ಬೆಳ್ಮಣ್‌ನ ವ್ಯಕ್ತಿಯೊಬ್ಬರು ತನ್ನ ಖಾತೆಯ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ.
ಬೆಳ್ಮಣ್ ನಿವಾಸಿ ಜೆರಾಲ್ಡ್ ನೊರೋನ್ಹಾ (68) ಎಂಬುವರಿಗೆ ಫೆ.20ರಂದು ಅಪರಿಚಿತರು 7037959206 ನಂಬರ್‌ನಿಂದ ವಾಟ್ಸಾಪ್ ಮುಖೇನ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದು, ಅದನ್ನು ಕ್ಲಿಕ್ ಮಾಡಿದಾಗ ಸ್ಟಾಕ್ ಒನ್‌ಗಾರ್ಡ್‌ಜಿ4 ಎಂಬ ವಾಟ್ಸಾೃಪ್ ತೆರೆದುಕೊಂಡಿದೆ. ಅದರಲ್ಲಿ ಹಣ ಹೂಡಿಕೆಯ ತರಬೇತಿ ಮತ್ತು ಹೂಡಿಕೆಯ ಬಗ್ಗೆ ಮಾಹಿತಿ ತಿಳಿಸಿದ್ದು, ಟ್ರೇಡಿಂಗ್‌ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಬಳಿಕ ಟ್ರೇಡಿಂಗ್ ಆ್ಯಪ್‌ನ ಲಿಂಕ್ ಕಳುಹಿಸಿದ್ದರು. ಅದನ್ನು ನಂಬಿದ ಜೆರಾಲ್ಡ್ ನೊರೋನ್ಹಾ ಲಿಂಕ್ ಮೂಲಕ ಹಣ ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಏ.5ರಿಂದ 20ರ ತನಕ ಹಂತಹಂತವಾಗಿ 9,42,000 ರೂ. ಹಣ ಪಾವತಿಸಿದ್ದರು. ಆದರೆ, ಈ ತನಕ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಲೀ ನೀಡದೆ ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…

ಪ್ರಯಾಣ ಮಾಡುವಾಗ ವಾಂತಿ ಬರುತ್ತದೆಯೇ? ಚಿಂತಿಸಬೇಡಿ, ಈ ಸಿಂಪಲ್​​ ಟಿಪ್ಸ್​ ಅನುಸರಿಸಿ ಸಾಕು! Vomiting while Travelling

Vomiting while Travelling : ಸಾಮಾನ್ಯವಾಗಿ ಕೆಲ ಜನರು ಪ್ರಯಾಣವನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕಾರು, ಬಸ್​ನಂತಹ…