More

  ಕೊಂಜಾಡಿ ಶಾಲಾ ಆರಂಭೋತ್ಸವ, ಆಕರ್ಷಕ ಬಣ್ಣ, ತಳಿರು ತೋರಣಗಳಿಂದ ಶೃಂಗಾರ

  ಆರ್ಡಿ: ಕೊಂಜಾಡಿ ಕಲ್ಮರ್ಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭೋತ್ಸವದ ಪ್ರಯುಕ್ತ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆ ಹೊಸದಾಗಿ ಆಕರ್ಷಕ ಬಣ್ಣದೊಂದಿಗೆ ಕಂಗೊಳಿಸುತ್ತಿದೆ.

  ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಬೇಸಿಗೆ ರಜೆ ಕಳೆದ ಬಳಿಕ ಶಾಲೆಯಲ್ಲಿ ಶುಕ್ರವಾರ ಆರಂಭೋತ್ಸವಕ್ಕಾಗಿ ತಳಿರು ತೋರಣ, ಬಣ್ಣ ಬಣ್ಣದ ಹೂವುಗಳು, ಬೂಲೂನ್‌ಗಳಿಂದ ಗುರುವಾರ ಶೃಂಗಾರಗೊಳಿಸಿದರು.

  ಶುಕ್ರವಾರ ಬೆಳಗ್ಗೆ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ, ಶಿಕ್ಷಣ ಇಲಾಖೆ ವಿವಿಧ ಸೌಲಭ್ಯಗಳೊಂದಿಗೆ ಪಠ್ಯ ಪುಸ್ತಕ ವಿತರಣೆ, ಮಧ್ಯಾಹ್ನ 2ಕ್ಕೆ ಎಸ್‌ಡಿಎಂಸಿ ಮತ್ತು ಪಾಲಕರ ಸಭೆ, 2.30ಕ್ಕೆ ಮಕ್ಕಳ ದಾಖಲಾತಿ ವಿನೂತನ ಕಾರ್ಯಕ್ರಮ ಅಂಗವಾಗಿ ಹಳೇ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ದಾನಿಗಳ ಕೊಡುಗೆಯಾಗಿ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್‌ಬುಕ್, ಲೇಖನಿ ಸಾಮಗ್ರಿಗಳ ಉಚಿತ ವಿತರಣೆ ನಡೆಯಲಿದೆ.

  See also  ನಂದಿ ಬೆಟ್ಟ ರೋಪ್ ವೇ ಯೋಜನೆಗೆ 15 ದಿನಗಳಲ್ಲಿ ಚಾಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts