ಉಪ್ಪಿನಂಗಡಿ : ಪೋನ್ ಕರೆಯನ್ನು ಸ್ವೀಕರಿಸಿದಾಗ ಖಾತೆಯಿಂದ ಹಣ ವರ್ಗಾವಣೆಯಾದ ಪ್ರಕರಣ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.
ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಮುಂಜಾನೆ ಪೋನ್ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ಮಾತುಕತೆ ಮಾಡದೆ ಕಡಿತಗೊಂಡಿತ್ತು. ಟ್ರೂ ಕಾಲರ್ ಮೂಲಕ ಕರೆಯನ್ನು ಶೋಧಿಸಿದಾಗ ವಂಚನಾ ಕರೆ ಎಂಬ ಸಂದೇಶ ಲಭಿಸಿತು. ಎಚ್ಚೆತ್ತುಕೊಳ್ಳುವುದರೊಳಗಾಗಿ ಈ ಫೋನ್ ನಂಬರ್‌ಗೆ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ 161 ರೂ. ಹಾಗೂ 14839 ರೂ. ಆಟೋ ಪೇ ಆಗಿದೆ ಎಂಬ ಸಂದೇಶ ಬಂದಿತ್ತು. ಐಪಿಪಿಬಿ ಖಾತೆಯ ಬಗ್ಗೆ ಇಲಾಖಾಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ 161 ರೂ. ವರ್ಗಾವಣೆಗೊಂಡಿದ್ದು, 14839 ರೂ. ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ತಡೆಹಿಡಿಯಲ್ಪಟ್ಟಿತ್ತು. ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದ್ದು, ಅವರು ಕರೆಯನ್ನು ಸ್ವೀಕರಿಸಲಿಲ್ಲ. ಹಣ ಲಪಟಾಯಿಸಲು ಬಳಸಿದ ಪೋನ್ ನಂಬ್ರ 68778220051 ಆಗಿದ್ದು, ಕರೆ ಸ್ವೀಕರಿಸಿದಾಗ ಖಾತೆಯಲ್ಲಿದ್ದ ಹಣವು ಅಟೋ ಪೇಗೆ ಒಳಗಾಗಿರುವುದು ವಿಸ್ಮಯ ಮೂಡಿಸಿದೆ. ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ನೇತ್ರಾವತಿಗೆ 7ನೇ ಸೇತುವೆ: ಸಜೀಪನಡು-ತುಂಬೆ ನಡುವೆ ನಿರ್ಮಾಣ : ಈಡೇರಿದ ಗ್ರಾಮಸ್ಥರ ಬಹುದಿನದ ಬೇಡಿಕೆ
ಸಾವಯವ ಪದ್ಧತಿಯಿಂದ ಮಣ್ಣಿನ ಫಲವತ್ತತೆ ವೃದ್ಧಿ : ಕಿಶೋರ್ ಕುವಾರ್ ಬೊಟ್ಯಾಡಿ ಮಾಹಿತಿ