More

    ಸದಾ ನಮ್ಮ ಹೃದಯದಲ್ಲಿ … ಫ್ರಾಂಕ್ಲಿನ್​ ಥಿಯೇಟರ್​ನಿಂದ ಸಂಚಾರಿ ವಿಜಯ್​ಗೆ ಗೌರವ

    ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್​ ಅವರಿಗೆ ಅಗೌರವ ತೋರಿಸಲಾಗಿದೆ ಎಂಬ ಬೇಸರ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಕೇಳಿಬಂದಿತ್ತು. ಇದೀಗ, ದೂರದ ಅಮೇರಿಕಾದಲ್ಲಿರುವ ಫ್ರಾಂಕ್ಲಿನ್​ ಥಿಯೇಟರ್​ನವರು, ವಿಜಯ್​ಗೆ ಸಂದೇಶ ಪ್ರದಶರ್ನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ.

    ಇದನ್ನೂ ಓದಿ: ಶಂಕರನ್​ ನಾಯರ್​ ಕುರಿತು ಕರಣ್​ ಜೋಹರ್​ ಬಯೋಪಿಕ್​ ನಿರ್ಮಾಣ

    ಸಂಚಾರಿ ವಿಜಯ್​ ಇತ್ತೀಚೆಗೆ ಅಪಘಾತಕ್ಕೀಡಾಗಿ ಬ್ರೇನ್​ಡೆಡ್​ ಆಗಿ ನಿಧನರಾದರು. ನಂತರದ ದಿನಗಳಲ್ಲಿ, ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಱರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್​ ಅವರಿಗೆ ಅಗೌರವ ತೋರಲಾಗಿದೆ ಎಂದು ನಿರ್ದೇಶಕ ಬಿ.ಎಸ್​. ಲಿಂಗದೇವರು ಬೇಸರ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ವಿಜಯ್​ ಅವರ ಹಲವು ಅಭಿಮಾನಿಗಳು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದೀಗ ಅಮೇರಿಕಾದ ಫ್ರಾಂಕ್ಲಿನ್​ ಥಿಯೇಟರ್​, ಸಂಚಾರಿ ವಿಜಯ್​ಗೆ ಗೌರವ ಸೂಚಿಸಿದೆ. ವಿಜಯ್​ ನೆನಪಲ್ಲಿ, ‘Always in our Heart , Sanchari Vijay, Gone Yet Not Forgotten’ ಎಂಬ ಸಂದೇಶವನ್ನು ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದೆ.

    ಇದನ್ನೂ ಓದಿ: ಕನಸಿನ ಮನೆ ಕಟ್ಟಿಸುವುದಕ್ಕೆ ಧನುಷ್​ ಖರ್ಚು ಮಾಡುತ್ತಿರುವುದೆಷ್ಟು ಹೇಳಿ ನೋಡೋಣ?

    ಈ ವಿಷಯವನ್ನು ಲಿಂಗದೇವರು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಕಾರಣರಾದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕನ್ನಡಿಗ ರವಿ ಕಶ್ಯಪ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ತಾಪ್ಸಿ ಜತೆಗೆ ಬೋಲ್ಡ್​ ದೃಶ್ಯಗಳಲ್ಲಿ ನಟಿಸೋಕೆ ಹೀರೋಗಳೇ ಹೆದರಿದ್ದರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts