ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಾಕಷ್ಟು ಏರಿಳಿತಗಳು ನಡೆಯುತ್ತಿವೆ. ವಿದೇಶಿ ಬಂಡವಾಳ ಹೂಡಿಕೆದಾರರ (FPI) ಮಾರಾಟವೇ ಇದಕ್ಕೆ ಪ್ರಮುಖ ಕಾರಣ. ಅಕ್ಟೋಬರ್‌ನಲ್ಲಿ ಕಳೆದ ಎಂಟು ವಹಿವಾಟು ಅವಧಿಗಳಲ್ಲಿ ಎಫ್‌ಪಿಐಗಳು 58 ಸಾವಿರ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ.
ಇದನ್ನೂ ಓದಿ: Lift: ಕಣ್ಮುಚ್ಚಿ ತೆರೆವಷ್ಟರಲ್ಲಿ ಬೈಕ್ ಸವಾರನಿಗೆ ಶಾಕ್..ಸುರಸುಂದರಾಂಗಿ ಮಾಡಿದ್ದೇನು?
ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮಾರಾಟ ಮುಂದುವರಿದಿದೆ. ಬಿಎಸ್‌ಇ ಸೆನ್ಸೆಕ್ಸ್ 85,000 ಮಟ್ಟವನ್ನು ಮುಟ್ಟಿದ ನಂತರ 81,000 ಪಾಯಿಂಟ್‌ಗಳಿಗೆ ಕುಸಿಯಲು ಇದೇ ಕಾರಣ ಎನ್ನಲಾಗುತ್ತಿದೆ.
ಇಷ್ಟಕ್ಕೂ ಭಾರತೀಯ ಮಾರುಕಟ್ಟೆಗಳಲ್ಲಿ ಎಫ್‌ಪಿಐ ಗಳು ಏಕೆ ಮಾರಾಟವಾಗುತ್ತಿವೆ? ವಿದೇಶಿ ವ್ಯಾಪಾರಸ್ತರು ಈಗ ಎಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ? ಇದರ ಹಿಂದಿರುವ ಪ್ರಮುಖ ಉದ್ದೇಶವೇನು ಎಂಬುದನ್ನು ನೋಡುವುದಾದರೆ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತವನ್ನು ತೊರೆದು ಚೀನಾ ಮಾರುಕಟ್ಟೆಗೆ ಹೋಗುತ್ತಿವೆ. ಚೀನಾದಲ್ಲಿ ಹೂಡಿಕೆ ಮಾಡಲುವ ವಿದೇಶಿ ಬಂಡವಾಳ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.
ಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಅಂಕಿಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ ಎಫ್‌ಪಿಐಗಳು ಭಾರತೀಯ ಮಾರುಕಟ್ಟೆಗಳಿಂದ 58,711 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. 2024 ರ ಜನವರಿಯಿಂದ ಅತಿ ಹೆಚ್ಚು ಮಾರಾಟವಾದ ಅವಧಿ ಇದಾಗಿದೆ. ಅಕ್ಟೋಬರ್‌ನಲ್ಲಿ, ಎಫ್‌ಪಿಐಗಳು ಪ್ರತಿದಿನ ಷೇರುಗಳನ್ನು ಮಾರಾಟ ಮಾಡುತ್ತಿವೆ ಎನ್ನಲಾಗುತ್ತಿದೆ. ‘
ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಎಫ್‌ಪಿಐಗಳು ಹೆಚ್ಚು ಮಾರಾಟವಾಗಿವೆ. ಇದರಿಂದಾಗಿ ಈಕ್ವಿಟಿ ಮಾರುಕಟ್ಟೆಯಲ್ಲಿ ಎಫ್‌ಪಿಐಗಳ ನಿವ್ವಳ ಹೂಡಿಕೆ 41,899 ಕೋಟಿ ರೂ.ಗೆ ಇಳಿದಿದೆ. ಈಕ್ವಿಟಿಯ ಹೊರತಾಗಿ ಎಫ್‌ಪಿಐಗಳು ಸಾಲ ಅಥವಾ ಬಾಂಡ್ ಗಳನ್ನು ಮಾರುಕಟ್ಟೆಗಳಿಂದ ಹಿಂತೆಗೆದುಕೊಳ್ಳುತ್ತಿವೆ.
ಎನ್‌ಎಸ್‌ಡಿಎಲ್ ಪ್ರಕಾರ, ಅಕ್ಟೋಬರ್ 12 ರವರೆಗೆ, ಎಫ್‌ಪಿಐ ಗಳು ಸಾಲ ಮಾರುಕಟ್ಟೆಯಿಂದ 1,635 ಕೋಟಿ ರೂಪಾಯಿಗಳನ್ನು ಹಿಂತೆಗೆದುಕೊಂಡಿದ್ದರೆ, ಸೆಪ್ಟೆಂಬರ್‌ನಲ್ಲಿ ಅವರು 1,299 ಕೋಟಿ ರೂಪಾಯಿ ನಿವ್ವಳ ಹೂಡಿಕೆ ಮಾಡಲಾಗಿದೆ.