

ಶ್ರೀನಗರ: ಭದ್ರತಾ ಪಡೆ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರಗಾಮಿಗಳು ಹತ್ಯೆಯಾಗಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಲಷ್ಕರ್–ಎ–ತಯಬಾ ಉಗ್ರಗಾಮಿ ಸಂಘಟನೆ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಕೇಂದ್ರ ಸಶಸ್ತ್ರ ಮೀಸಲು ಪಡೆಯ ಯೋಧರು ತಿಳಿಸಿದ್ದಾರೆ.
ಕಣಿವೆ ರಾಜ್ಯದ ಅನಂತ್ನಾಗ್ ಜಿಲ್ಲೆಯ ದಯಾಳಗಂ ವಸತಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ.
ದಯಾಳಗಂನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಶನಿವಾರ ರಾತ್ರಿಯೇ ಇಡೀ ಪ್ರದೇಶವನ್ನು ಯೋಧರು ಸುತ್ತುವರಿದಿದ್ದರು. ಮನೆಯಲ್ಲಿ ಅಡಗಿದ್ದ ಉಗ್ರರು ಭಾನುವಾರ ಬೆಳಗ್ಗೆ ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದರು. ಕೂಡಲೇ ಯೋಧರು ಪ್ರತಿದಾಳಿ ನಡೆಸಿದರು.
ಯೋಧರ ಗುಂಡಿನ ದಾಳಿಗೆ ಬಲಿಯಾದ ಉಗ್ರರಿಂದ ಎಕೆ 47 ರೈಫಲ್, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)