ಮಾರಣಾಂತಿಕವಾದ ಆಟ; ನಾಲೆ​ಗೆ ಬಿದ್ದ ನಾಲ್ವರಲ್ಲಿ ಇಬ್ಬರು ಮಕ್ಕಳ ಸಾವು..

Canal
ಮಕ್ಕಳ ಸಂಬಂಧಿಕರ ರೋದನ
Published on

ಚಿಕ್ಕೋಡಿ: ಮಕ್ಕಳು ಆಟ ಆಡುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಿದ್ದು, ಆ ಪಟ್ಟಿಗೆ ಈಗ ಮತ್ತೊಂದು ಘಟನೆ ಸೇರ್ಪಡೆಗೊಂಡಿದೆ. ಈ ದುರಂತದಲ್ಲಿ ನಾಲ್ವರಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಇನ್ನಿಬ್ಬರು ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸಪ್ನಾ ವಿನಾಯಕ್ ಪುಂಡಿಪಲ್ಲೆ (11) ಮತ್ತು ಪ್ರಥಮ ವಿನಾಯಕ ಪುಂಡಿಪಲ್ಲೆ (7) ಮೃತಪಟ್ಟಿದ್ದು, ಶ್ರೀಧರ್ ಶಂಕರ್ ಪುಂಡಿಪಲ್ಲೆ (4) ವಿವೇಕ ವಿನಾಯಕ ಪುಂಡಿಪಲ್ಲೆ (8) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ನಾಲ್ವರು ಮಕ್ಕಳು ಆಟ ಆಡುತ್ತ ಕರಿಮಸೂತಿ ಏತ ನೀರಾವರಿ ನಾಲೆಗೆ ಬಿದ್ದಿದ್ದರು. ಆ ಪೈಕಿ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ. ಮಕ್ಕಳನ್ನು ರಕ್ಷಿಸಲು ಸ್ಥಳೀಯರು ತಕ್ಷಣ ಧುಮುಕಿದರೂ ಇಬ್ಬರನ್ನಷ್ಟೇ ಜೀವಂತ ರಕ್ಷಿಸಲು ಸಾಧ್ಯವಾಗಿದೆ. ಇನ್ನಿಬ್ಬರ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net