ಬೇಡಡ್ಕ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ

02 (1)
Published on

ಮುಳ್ಳೇರಿಯ: ಬೇಡಡ್ಕ ತಾಲೂಕು ಪ್ರಧಾನ ಕಚೇರಿ ಆಸ್ಪತ್ರೆ ಆವರಣದಲ್ಲಿ 12.68 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಹೊಸ ಕಟ್ಟಡಕ್ಕೆ ಶಾಸಕ ಸಿ.ಎಚ್.ಕುಂಞಂಬು ಶಂಕುಸ್ಥಾಪನೆ ನೆರವೇರಿಸಿದರು.

ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ವ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಕಿಟ್ಕೋ ಸೈಟ್ ಇಂಜಿನಿಯರ್ ಕೆ.ಹರಿಣಿ ವರದಿ ಮಂಡಿಸಿದರು. ಉಪ ಡಿಎಂಒ ಡಾ.ಕೆ.ಕೆ.ಶಾಂತಿ, ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷೆ ಎ.ಪಿ.ಉಷಾ, ಕುತ್ತಿಕೋಲ್ ಗ್ರಾ.ಪಂ. ಅಧ್ಯಕ್ಷ ಮುರಳಿ ಪಯ್ಯಂಗಾನ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್, ಡಿಪಿಸಿ ಸರ್ಕಾರಿ ನಾಮನಿರ್ದೇಶಿತ ಸಿ.ರಾಮಚಂದ್ರನ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸವಿತಾ, ಬಿ.ಕೆ.ನಾರಾಯಣನ್, ಬೇಡಡ್ಕ ಗ್ರಾಪಂ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಲತಾ, ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಕೆ.ಪಿ.ರಾಮಚಂದ್ರನ್ ಮತ್ತು ಜನಾರ್ದನನ್ ಮೊದಲಾದವರಿದ್ದರು. ಬೇಡಡ್ಕ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯಾ ಸ್ವಾಗತಿಸಿದರು. ವೈದ್ಯಾಧಿಕಾರಿ ಕೆ.ಪ್ರದೀಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net