ಕುಕ್ಕೆ ದೇಗುಲಕ್ಕೆ ಡಸ್ಟ್‌ಬಿನ್ ಕೊಡುಗೆ

01
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಭಾಸ್ಕರ್ ಎಂಬುವರು ಬಾಟಲಿ ಮಾದರಿ 4 ಡಸ್ಟ್‌ಬಿನ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸುಮಾರು 50 ಸಾವಿರ ಮೌಲ್ಯದಲ್ಲಿ 4 ಡಸ್ಟ್‌ಬಿನ್‌ಗಳು ತಯಾರಿಸಲಾಗುತ್ತಿದ್ದು, ಈಗಾಗಲೇ ಎರಡನ್ನು ಹಸ್ತಾಂತರಿಸಲಾಗಿದೆ.ಇನ್ನೆರಡು ಡಸ್ಟ್‌ಬಿನ್‌ಗಳು ತಯಾರಾಗಿ ಶ್ರೀ ಶ್ರೀ ದೇವಳಕ್ಕೆ ಹಸ್ತಾಂತರಗೊಳ್ಳಲಿದೆ. ತಾನು ನೀಡಿದ ಕೊಡುಗೆಯನ್ನು ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿಗೆ ಹಸ್ತಾಂತರಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಎಸ್.ಜೆ., ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಸೌವ್ಯಾ ಭರತ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ., ಲೋಲಾಕ್ಷ ಕೈಕಂಬ, ಅಚ್ಯುತ ಆಲ್ಕಬೆ, ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net