ಗೋಳಿಯಂಗಡಿ: ಗೋಳಿಯಂಗಡಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಹಳೇ ವಿದ್ಯಾರ್ಥಿ ಬೆಂಗಳೂರು ಹಾಸ್ಪಿಟಾಲಿಟಿ ಉದ್ಯಮಿ ಎಚ್.ಗೋಪಾಲ ಶೆಟ್ಟಿ ಅವರು ಕೊಡುಗೆಯಾಗಿ ನೀಡಲಿರುವ ಶಾಲೆಯ ಮುಂಭಾಗದ ಆವರಣಗೋಡೆ ನಿರ್ಮಾಣ ಶಿಲಾನ್ಯಾಸದ ಪ್ರಯುಕ್ತ ಬೆಳ್ವೆ ಶ್ರೀಶಂಕರನಾರಾಯಣ ದೇವಸ್ಥಾನದ ಪ್ರದಾನ ಅರ್ಚಕ ಶಂಕರನಾರಾಯಣ ಐತಾಳ್ ನೇತೃತ್ವದಲ್ಲಿ ಸೋಮವಾರ ಪೂಜೆ ನಡೆಯಿತು.
ಹಳೇ ವಿದ್ಯಾರ್ಥಿ ಬೆಂಗಳೂರು ಹಾಸ್ಪಿಟಾಲಿಟಿ ಉದ್ಯಮಿ, ದಾನಿ ಎಚ್.ಗೋಪಾಲ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ದಾನಿ ಪುರುಷೋತ್ತಮ ಹೆಗ್ಡೆ ಹುಯ್ಯರು, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಶೆಟ್ಟಿ ಬೆಳ್ವೆ, ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಆವರ್ಸೆ ಹಾಗೂ ಪದಾಧಿಕಾರಿಗಳು, ಗೋಳಿಯಂಗಡಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜ ವೈದ್ಯ ಹಾಗೂ ಉಪನ್ಯಾಸಕರು, ಪ್ರೌಢ ಶಾಲೆ ಮುಖ್ಯ ಕ್ಷಕ ರಾಘವೇಂದ್ರ ಗಾಣಿಗ ಹಾಗೂ ಸಹ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷೆ ಸುಧಾ ಪ್ರಭು, ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಮೊಕ್ತೇಸರ ಬಿ.ಶಂಕರ ಶೆಟ್ಟಿ ಬೆಳ್ವೆ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಬೆಳ್ವೆ ಸಂದೇಶ್ ಕಿಣಿ ಮೆಮೂರಿಯಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದ್ಯಮಿ ಬಿ.ಸತೀಶ್ ಕಿಣಿ ಬೆಳ್ವೆ, ಬೆಳ್ವೆ ಉದ್ಯಮಿ ಬಿ.ರಾಜೇಂದ್ರ ಕಿಣಿ ಬೆಳ್ವೆ, ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಶೆಟ್ಟಿ ಯಳಂತೂರು, ಆವರ್ಸೆ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಪ್ರಮೋದ್ ಹೆಗ್ಡೆ ಹಿಲಿಯಾಣ, ಚಿತ್ತರಂಜನ್‌ದಾಸ್ ಶೆಟ್ಟಿ ಹಿಲಿಯಾಣ, ಗೋಳಿಯಂಗಡಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.