ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನಾವು ಆಚರಿಸುವ ಹಬ್ಬಗಳಿಂದ ದೇವರ ಮೇಲಿನ ವಿಶ್ವಾಸ, ಭಕ್ತಿ ಮಹತ್ವ ತಿಳಿಸುತ್ತದೆ. ಇದರಿಂದ ನಮ್ಮ ಪರಂಪರೆ ಸದೃಢವಾಗುತ್ತದೆ ಎಂದು ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಉಡುಪಿಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ.ಬೀಸು ನಾಯ್ಕ ಹೇಳಿದರು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಮಿತಿ, 32ನೇ ವರ್ಷದ ಶರನ್ನವರಾತ್ರಿ ಮಹೋತ್ಸವ, ತೃತೀಯ ವರ್ಷದ ಶಾರದೋತ್ಸವ ಕೊಕ್ಕರ್ಣೆ ದಸರಾ-2024ರ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರನ್ನವರಾತ್ರಿ ಉತ್ಸವ ಸಮಿತಿ ಹೊರೆಕಾಣಿಕೆ ಸಮಿತಿ ಸಂಚಾಲಕ ಗುರುರಾಜ್ ಪೂಜಾರಿ, ಹೆಬ್ರಿ ಫೆಡರಲ್ ಬ್ಯಾಂಕ್ ಪ್ರಬಂಧಕ ಅರ್ಜುನ, ಸೂರಾಲು ಅರಮನೆ ಅಶೋಕ್ ಕುಮಾರ್, ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಗಂಗಾಧರ ಶೆಟ್ಟಿ, ಉದ್ಯಮಿಗಳಾದ ಚೇತನ ಶೆಟ್ಟಿ, ಪ್ರಸಾದ ಹೆಗ್ಡೆ, ಕೊಕ್ಕರ್ಣೆ ಕೆಂಜೂರು ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ವಿಶ್ವನಾಥ ಆಚಾರ್ಯ ಕಲ್ಗೋಳಿ, ಕೊಕ್ಕರ್ಣೆ ಕೆಂಜೂರು ಗಾಯತ್ರಿ ಮಹಿಳಾ ಸಂಘ ಅಧ್ಯಕ್ಷೆ ಪ್ರೇಮಾ ಭಾಸ್ಕರ ಆಚಾರ್ಯ, ರಾಜೀವ ನಗರ ಕೊಕ್ಕರ್ಣೆ ಬಬ್ಬು ಸ್ವಾಮಿ ದೇವಸ್ಥಾನ ಅರ್ಚಕ ಗಣೇಶ, ಶರನ್ನವರಾತ್ರ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಶ್ಯಾನುಭಾಗ್, ಕಾರ್ಯಕ್ರಮ ನಿರ್ವಹಣಾ ಸಮಿತಿ ಸಂಚಾಲಕ ಹರಿಮಕ್ಕಿ ಮಂಜುನಾಥ ಶೆಟ್ಟಿ, ಪುರಮೆರವಣಿಗೆ ಸಮಿತಿ ಸಂಚಾಲಕ ಅಕ್ಷೇಂದ್ರ ಗಾಂಧಿನಗರ ಮತ್ತಿತರರು ಉಪಸ್ಥಿತರಿದ್ದರು.