

ಮೊಹಾಲಿ ಪಂಜಾಬ್ನ ಮಾಜಿ ಸಿಎಂ, ಶಿರೋಮಣಿ ಅಕಾಲಿದಳ ಪಕ್ಷದ ಮುಖ್ಯಸ್ಥರು ಪ್ರಕಾಶ್ ಸಿಂಗ್ ಬಾದಲ್(95) ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೊಹಾಲಿಯ ಪೋರ್ಟಿಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದಾಖಲಿಸಲಾಗಿತ್ತು.
ಉಸಿರಾಟದ ಸಮಸ್ಯೆ ಇಂದ ಬಳಲುತ್ತಿದ್ದ ಅವರನ್ನು ವೈದ್ಯರು ತೀವವರ ನಿಘಾ ಘಟಕ(ICU)ನಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸಂಜೆ ಸುಮಾರು 8 ಘಂಟೆಗೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪ್ರಕಾಶ್ ಸಿಂಗ್ ಬಾದಲ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.