ಇಸ್ಕಾನ್​ಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಭೇಟಿ

Ramnath
Published on

ಬೆಂಗಳೂರು: ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ದಂಪತಿಗಳು ಮಂಗಳವಾರ ಬೆಂಗಳೂರಿನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದರು.

ಪತ್ನಿ ಸವಿತಾ ಕೋವಿಂದ್ ಮತ್ತು ಪುತ್ರಿ ಸ್ವಾತಿ ಕೋವಿಂದ್ ಅವರೊಂದಿಗೆ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ ಅವರು ಬಲರಾಮ ಸಮೇತ ಶ್ರೀ ರಾಧಾ ಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಜತ ಮಹೋತ್ಸವದ ಸಂಭ್ರಮದಲ್ಲಿರುವ ರಾಜಾಜಿನಗರದ ಹರೇ ಕೃಷ್ಣ ಗಿರಿಗೆ ಭೇಟಿ ನೀಡಿದ ರಾಮನಾಥ ದಂಪತಿಗಳನ್ನು ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಮಧು ಪಂಡಿತ್ ದಾಸರು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.

ರಾಮನಾಥ ಕೋವಿಂದ್ ಅವರು ಇಸ್ಕಾನ್ ಬೆಂಗಳೂರು ತನ್ನ ರಜತ ಮಹೋತ್ಸವ ಆಚರಿಸಕೊಳ್ಳುತ್ತಿರುವ ವಿಷಯ ತಿಳಿದು ಶುಭಹಾರೈಸಿದರು. ಇದೇ ವೇಳೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳಸುವುದರಲ್ಲಿ ದೇಶ ಮತ್ತು ವಿದೇಶದಲ್ಲಿ ಕೆಲಸ ಮಾಡುತ್ತಿರುವ ಇಸ್ಕಾನ್ ಸಂಸ್ಥೆಯ ಸೇವೆಯನ್ನು ಕೊಂಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net