

Tejashwi Yadav: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿ ಸೊಸೆ, ತೇಜಸ್ವಿ ಯಾದವ್ ಪತ್ನಿಯನ್ನು ಜೆರ್ಸಿ ಹಸು ಎಂದು ಮಾಜಿ ಶಾಸಕ ರಾಜವಲ್ಲಭ್ ಯಾದವ್ ನೀಡಿದ ವಿವಾದಾತ್ಮಕ ಹೇಳಿಕೆ ಬಿಹಾರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಹೇಳಿಕೆ ಅನಾರೋಗ್ಯ ಮನಸ್ಥಿತಿಯದ್ದು ಎಂದು ಆರ್ಜೆಡಿ ಕಿಡಿಕಾರಿದೆ.
ನರಡಿಗಂಜ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪೋಕ್ಸೋ ಕೇಸ್ನಲ್ಲಿ ಒಂಬತ್ತೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆರ್ಜೆಡಿ ಮಾಜಿ ಶಾಸಕ ರಾಜವಲ್ಲಭ್ ಯಾದವ್, ತೇಜಸ್ವಿ ಯಾದವ್ ಜಾತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಯಾದವ್ ಹುಡುಗಿಯನ್ನು ಮದುವೆಯಾಗಲಿಲ್ಲ. ಮದುವೆಯಾಗಿದ್ದರೆ, ಯಾದವ್ ಸಮುದಾಯದ ಮಗಳಿಗೆ ಲಾಭವಾಗುತ್ತಿತ್ತು. ಅವರು ಹರಿಯಾಣ-ಪಂಜಾಬ್ನಿಂದ ಯಾರನ್ನೋ ಜೆರ್ಸಿ ಹಸುವಿನಂತೆ ಕರೆತಂದಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜವಲ್ಲಭ್ ಹೇಳಿಕೆ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಆರ್ಜೆಡಿ ನಾಯಕ ಕೌಶಲ್ ಯಾದವ್, ತೇಜಸ್ವಿ ಯಾದವ್ ಅವರ ಪತ್ನಿಯ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ರಾಜ್ವಲ್ಲಭ್ ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಇಂತಹ ಹೇಳಿಕೆಯಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ನೋವಾಗಿದೆ. ಇದು ತೇಜಸ್ವಿ ಅವರ ಪತ್ನಿಗೆ ಮಾತ್ರವಲ್ಲದೆ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ. ಈ ವ್ಯಕ್ತಿಯನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ, ಕುರ್ಮಿ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಿತೀಶ್ ಕುಮಾರ್ ಸರ್ಕಾರ ಅವರನ್ನು ಜೈಲಿಗೆ ಕಳುಹಿಸಿತು. ಈಗ ಜೈಲಿನಿಂದ ಹೊರಬಂದ ನಂತರ,ಲಾಲು ಯಾದವ್ ಅವರ ಸೊಸೆಯನ್ನು ನಿಂದಿಸುವುದು ಅವರಿಗೆ ಪ್ರತಿಫಲದಂತೆ? ಮಹಿಳೆಯರು ಮತ್ತು ಹುಡುಗಿಯರನ್ನು ತಪ್ಪು ಉದ್ದೇಶದಿಂದ ನೋಡುವುದು ಅವರ ಏಕೈಕ ಗುರುತಾಗಿದೆ ಎಂದು ಕೌಶಲ್ ವಾಗ್ದಾಳಿ ನಡೆಸಿದ್ದಾರೆ.
ತೇಜಸ್ವಿ ಯಾದವ್ 2021 ರಲ್ಲಿ ಡಿಪಿಎಸ್ ಆರ್ಕೆ ಪುರಂನ ತಮ್ಮ ಬ್ಯಾಚ್ಮೇಟ್ ರಾಚೆಲ್ ಕೊಡಿನ್ಹೋ ಅವರನ್ನು ವಿವಾಹವಾಗಿದ್ದಾರೆ. ಮೂಲತಃ ಹರಿಯಾಣದ ರೇವಾರಿಯವರಾದ ಅವರು ಮದುವೆ ಬಳಿಕ ತಮ್ಮ ಹೆಸರನ್ನು ರಾಜಶ್ರೀ ಯಾದವ್ ಎಂದು ಬದಲಾಯಿಸಿಕೊಂಡಿದ್ದಾರೆ. 2023ರಲ್ಲಿ ತೇಜಸ್ವಿ ಮತ್ತು ರಾಜಶ್ರೀ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈ ವರ್ಷದ ಮೇ ತಿಂಗಳಲ್ಲಿ ಅವರು ಗಂಡು ಮಗುವಿಗೆ ಪೋಷಕರಾಗಿದ್ದಾರೆ. (ಏಜೆನ್ಸೀಸ್)