More

    ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಮಾಜಿ ಮಿಸ್​ ಇಂಡಿಯಾ

    ಮುಂಬೈ: ತೀವ್ರ ಅನಾರೊಗ್ಯದಿಂದ ಬಳಲುತ್ತಿದ್ದ ತ್ರಿಪುರಾ ಮೂಲದ ಮಾಜಿ ಮಿಸ್ ಇಂಡಿಯಾ ರಿಂಕಿ ಚಕ್ಮಾ (28) ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

    ಕೆಳದ ಎರಡು ವರ್ಷಗಳಿಂದ ಫಿಲೋಡ್ಸ್​ ಟ್ಯೂಮರ್​ನಿಂದ ಬಳಲುತ್ತಿದ್ದ ರಿಂಕಿ ಚಕ್ಮಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಗಿದ್ದರು. ಫೆಮಿನಾ ಮಿಸ್​​ ಇಂಡಿಯಾ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಳ್ಳಲಾಗಿದೆ. 2017ರಲ್ಲಿ ನಡೆದ ಮಿಸ್​ ಇಂಡಿಯಾ ತ್ರಿಪುರಾ ಸ್ಫರ್ಧೆಯನ್ನು ರಿಂಕಿ ಜಯಸಿದ್ದರು.

    ಫೆಬ್ರವರಿ 22ರಂದು ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್​ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗಿತ್ತಾದರೂ ಸ್ಪಂದಿಸದ ಕಾರಣ ಅವರು ಮಾರ್ಚ್​ 01ರಂದು ನಿಧನರಾಗಿದ್ದಾರೆ. ರಿಂಕಿ ಅವರ ಸಾವಿಗೆ ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts