ನೂತನ ಚುನಾವಣಾ ಆಯುಕ್ತರಾಗಿ ರಾಜೀವ್​ ಕುಮಾರ್​ ನೇಮಕ

Rajeev Kumar
Published on

ನವದೆಹಲಿ: ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಚುನಾವಣಾ ಆಯುಕ್ತ ಅಶೋಕ್​ ಲಾವಸಾ ಅವರ ಸ್ಥಾನಕ್ಕೆ ಮಾಜಿ ಹಣಕಾಸು ಕಾರ್ಯದರ್ಶಿ ರಾಜೀವ್​ ಕುಮಾರ್​ ಅವರನ್ನು ನೇಮಕ ಮಾಡಲಾಗಿದೆ.

ಏಷಿಯನ್​ ಡೆವಲಪ್​ಮೆಂಟ್​ ಬ್ಯಾಂಕ್​ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವ ಅಶೋಕ್ ಲಾವಸಾ ಮೊನ್ನೆಯೇ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ನೇಮಕಗೊಂಡಿರುವ ನಿವೃತ್ತ ಐಎಎಸ್​ ಅಧಿಕಾರಿ ರಾಜೀವ್​ ಕುಮಾರ್ ಆಗಸ್ಟ್​ 31ರಿಂದ ಚುನಾವಣಾ ಆಯುಕ್ತನ ಹುದ್ದೆಗೇರಲಿದ್ದಾರೆ ಎಂದು ಕಾನೂನು ಸಚಿವಾಲಯ ತಿಳಿಸಿದ್ದಾರೆ.

ಅಶೋಕ್​ ಲಾವಸಾ ಅವರು ಪಿಲಿಫ್ಪೀನ್ಸ್​ ಮೂಲದ ಏಷಿಯಲ್​ ಡೆವಲೆಪ್​ಮೆಂಟ್​ ಬ್ಯಾಂಕ್​ ಸೇರಲು ಚುನಾವಣಾ ಆಯುಕ್ತನ ಸ್ಥಾನಕ್ಕೆ ಆಗಸ್ಟ್​ 18ರಂದು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಸಲ್ಲಿಸಿದ್ದಾರೆ. ಅವರು ಆಗಸ್ಟ್​ 31ರಂದು ರಿಲೀವ್​ ಆಗಲಿದ್ದು, ಅಂದಿನಿಂದ ರಾಜೀವ್​ ಕುಮಾರ್ ಅಧಿಕೃತವಾಗಿ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net