ಕರ್ನಾಟಕ ಕೈಗಾರಿಕಾ ಸಂಘಗಳ ನೂತನ ಅಸೋಸಿಯೇಷನ್ ರಚನೆ

bic
Published on

ಬೆಂಗಳೂರು: ರಾಜ್ಯದ ಎಲ್ಲ ಕೈಗಾರಿಕಾ ಸಂಘಗಳನ್ನು ಒಂದುಗೂಡಿಸಿ, ಅವುಗಳ ಸಹಭಾಗಿತ್ವದಲ್ಲಿ ಕೌನ್ಸಿಲ್ ಆಫ್ ಅಸೋಸಿಯೇಷನ್ಸ್(ಸಿಒಎ) ರಚಿಸಿರುವುದಾಗಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್(ಬಿಸಿಐಸಿ) ಅಧ್ಯಕ್ಷ ವಿನೀತ್ ವರ್ಮಾ ತಿಳಿಸಿದ್ದಾರೆ.

ಕರ್ನಾಟಕದ ಕೈಗಾರಿಕೆಗಳಿಗೆ ಏಕೀಕೃತ ಧ್ವನಿಯನ್ನು ನೀಡುವ ಮತ್ತು ಸಮಾನ ಧ್ಯೇಯಗಳ ಕಡೆಗೆ ಶ್ರಮಿಸುವ ಉದ್ದೇಶದಿಂದ ಈ ಮಂಡಳಿಯನ್ನು ರಚಿಸಲಾಗಿದ್ದು, ಎಲ್ಲಾ ಸಮಸ್ಯೆಗಳ ಕುರಿತು ಕಾರ್ಯತಂತ್ರಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಸಾಮಾನ ವೇದಿಕೆಯನ್ನು ಒದಗಿಸಲಿದೆ.

ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಮತ್ತಷ್ಟು ಪ್ರೋತ್ಸಾಹಿಸುವಲ್ಲಿ ಸರ್ಕಾರಕ್ಕೆ ಬೆಂಬಲ ನೀಡಲು ತನ್ನ ಪರಿಣತಿ ಮತ್ತು ಸಂಪನ್ಮೂಲಗಳನ್ನು ಸಹ ಸಿಒಎ ವಿಸ್ತರಿಸಲಿದೆ. ಸಿಒಎ ಸಂಸ್ಥೆಯು ಬೃಹತ್ ಯೋಜನೆಗಳನ್ನು ನಡೆಸುವುದಕ್ಕೆ ಬೇಕಾದ ಸಂಪನ್ಮೂಲ, ಜ್ಞಾನ ಮತ್ತು ಪರಿಣತಿಗಳನ್ನು ಒಟ್ಟುಗೂಡಿಸಿ, ಉದ್ಯಮಗಳು ಒಂಟಿಯಾಗಿ ಕೈಗೊಳ್ಳಲು ಸಾಧ್ಯವಾಗದ ಕಾರ್ಯಗಳನ್ನು ಸಾಂಘಿಕವಾಗಿ ಕೈಗೊಳ್ಳಲಿದೆ ಎಂದು ವಿನೀತ್ ವರ್ಮಾ ಹೇಳಿದ್ದಾರೆ.

ಸಿಒಎ ಸಂಸ್ಥೆಯ ಸ್ಥಾಪಕ ಸದಸ್ಯ ಸಂಘಗಳು

* ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್(ಬಿಸಿಐಸಿ)

* ಬಿಡದಿ ಕೈಗಾರಿಕೆಗಳ ಸಂಘ(ಬಿಐಎ)

* ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆಗಳ ಸಂಘ(ಇಎಲ್‌ಸಿಐಎ)

* ಫೆಡರೇಷನ್ ಆಫ್ ಕರ್ನಾಟಕ ಚೇಂಬಸ್‌ರ್ ಆಫ್ ಕಾಮಸ್‌ರ್ ಆ್ಯಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ)

* ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕೆಎಎಸ್‌ಎಸ್‌ಐಎ)

* ಕರ್ನಾಟಕ ಉದ್ಯೋಗಿಗಳ ಸಂಘ(ಕೆಇಎ)

* ಲಘು ಉದ್ಯೋಗ್ ಭಾರತಿ(ಎಲ್‌ಯುಬಿ)

* ಪೀಣ್ಯ ಕೈಗಾರಿಕೆಗಳ ಸಂಘ(ಪಿಐಎ)

* ವೈಟ್‌ಫೀಲ್ಡ್ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಂಘ(ಡಬ್ಲ್ಯೂಎಸಿಐಎ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net