

ಬೆಂಗಳೂರು: ಬಿಹಾರದ ಪ್ರಸಿದ್ಧ ಆಹಾರ ಪದಾರ್ಥ ಮಖಾನವನ್ನು ದಕ್ಷಿಣ ಭಾರತಕ್ಕೆ ಪರಿಚಯಿಸುವ ಉದ್ದೇಶದಿಂದ ಬಿಹಾರ ಸರ್ಕಾರವು ಇಂಡಿಯನ್ ಚೇಂಬರ್ ಆ್ ಕಾಮರ್ಸ್ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಖಾನ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ ಆವರಣದಲ್ಲಿ ಹಮ್ಮಿಕೊಂಡಿರುವ ಮಖಾನ ಮಹೋತ್ಸವಕ್ಕೆ ಬಿಹಾರ ಡಿಸಿಎಂ ಸಾಮ್ರಾಟ್ ಚೌದರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಚೌದರಿ, ದೇಶದಲ್ಲೇ ಅತಿಹೆಚ್ಚು ಮಖಾನ ಉತ್ಪಾದಿಸುವ ರಾಜ್ಯ ಬಿಹಾರ. ಜಾಗತಿಕ ಮಟ್ಟದಲ್ಲಿ ಮಖಾನದ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಿರುವುದಾಗಿ ಹೇಳಿದರು.
ಉತ್ತರ ಭಾರತದಲ್ಲಿ ಮಖಾನ ಕೇವಲ ಆಹಾರ ಪದಾರ್ಥವಷ್ಟೇ ಅಲ್ಲದೆ, ಕೃಷಿಕ್ರಾಂತಿ, ಉದ್ಯೋಗ, ಧಾರ್ಮಿಕ ಸಂಬಂಧವನ್ನು ಅವಲಂಬಿಸಿದೆ. ಹಲವು ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ಮಖಾನ ಹಂಚಲಾಗುತ್ತದೆ. ಆರೋಗ್ಯಕ್ಕೆ ಉತ್ತಮ ಆಹಾರವಾಗಿರುವ ಮಖಾನವನ್ನು ದಕ್ಷಿಣ ಭಾರತೀಯರಿಗೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೇಳ ಆಯೋಜಿಸಲಾಗಿದೆ.
ಆಹಾರ ಸಂಸ್ಕೃತಿಯ ವಿನಿಮಯದಿಂದ ‘ಏಕ್ ಭಾರತ್ ಶ್ರೇಷ್ಠ ಭಾರತ’ ೋಷಣೆ ಸಾಕಾರಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅನುಷ್ಠಾನಗೊಳ್ಳಲಿದೆ ಎಂದು ಚೌದರಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಹಾರ ಕೃಷಿ ಮತ್ತು ಆರೋಗ್ಯ ಸಚಿವ ಮಂಗಲ್ ಪಾಂಡೆ, ಹಿರಿಯ ಅಧಿಕಾರಿಗಳಾದ ಸಂಜಯ ಕುಮಾರ್, ಅಭಿಷೇಕ ಕುಮಾರ್, ಐಸಿಸಿ ಮುಖ್ಯಸ್ಥ ಶಿವಕುಮಾರ್, ಬಿಸಿಐಸಿಯ ರವಿ, ಆಶಾ ಮತ್ತಿತರರು ಉಪಸ್ಥಿತರಿದ್ದರು. ಇಂದು (ಶನಿವಾರ) ಕೂಡ ನಡೆಯಲಿರುವ ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.
"ಬಿಹಾರವು ಮಖಾನ ಉತ್ಪಾದನೆಗೆ ಜಿಐ ಟ್ಯಾಗ್ ಪಡೆದಿದ್ದು, ಇದೊಂದು ಉತ್ತಮ ಪೌಷ್ಠಿಕ ಆಹಾರವಾಗಿದೆ. ಮಖಾನದಿಂದ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಇದರಲ್ಲಿರುವ ಹೈ ೈಬರ್ ಅಂಶ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ."
-ಮಂಗಲ್ ಪಾಂಡೆ, ಬಿಹಾರ ಕೃಷಿಸಚಿವ