ಉಪ್ಪುಂದ ಕ್ಷೇತ್ರಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ : ಅಧ್ಯಕ್ಷರಾಗಿ ಎಸ್.ಸತೀಶ್ ಅಧಿಕಾರ ಸ್ವೀಕಾರ

samiti
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎಸ್.ಸತೀಶ ಶೆಟ್ಟಿ ಸೋಮವಾರ ಅಧಿಕಾರ ಸ್ವೀಕರಿಸಿದರು
Published on

ಬೈಂದೂರು: ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಡಳಿತದಲ್ಲಿರುವ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಎಂಟು ವರ್ಷಗಳ ಬಳಿಕ ನೂತನ ವ್ಯಪಸ್ಥಾಪನಾ ಸಮಿತಿ ರಚನೆಯಾಗಿದೆ. ಅಧ್ಯಕ್ಷರಾಗಿ ಎಸ್.ಸತೀಶ ಶೆಟ್ಟಿ ಚಮಟೆಹರ್ಲು ಸೋಮವಾರ ಅಧಿಕಾರ ಸ್ವೀಕರಿಸಿದರು. ಸದಸ್ಯರಾಗಿ ಅರ್ಚಕ ಪ್ರಕಾಶ ಉಡುಪ, ರಾಮ ಎಸ್. ಉಪ್ಪುಂದ, ಲಲಿತಾ ಶೆಟ್ಟಿ, ಅಂಬಿಕಾ, ನಾರಾಯಣ ಖಾರ್ವಿ, ರಾಜೇಶ್ ದೇವಾಡಿಗ, ಯು.ರವೀಂದ್ರ ಪ್ರಭು, ಜನಾರ್ದನ, ಮಾಚ ಪೂಜಾರಿ ನೇಮಕಗೊಂಡಿದ್ದಾರೆ.

ದೇವಳ ಆಡಳಿತಾಧಿಕಾರಿ ಪ್ರದೀಪ್ ಆರ್. ಅಧಿಕಾರ ಹಸ್ತಾಂತರಿಸಿದರು. ದೇವಾಲಯ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಬಿ.ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಕೆ.ಬಾಬು ಶೆಟ್ಟಿ, ಎಸ್. ಮದನಕುಮಾರ್, ಗ್ರಾಪಂ ಸದಸ್ಯ ಬಾಬು ದೇವಾಡಿಗ, ವಾಸುದೇವ ಪೂಜಾರಿ, ರಾಮಚಂದ್ರ ಖಾರ್ವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net