ಮಧೂರು ಬ್ರಹ್ಮಕಲಶ ಮುಂಬೈ ಸಮಿತಿ ರಚನೆ

New Project (10)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆಯ ಯಶಸ್ಸಿಗಾಗಿ ಮುಂಬಯಿ ಸಮಿತಿ ರಚನಾ ಸಭೆ ಮುಂಬೈ ಕುರ್ಲಾದ ಬಂಟರ ಭವನ ಸಭಾಂಗಣದಲ್ಲಿ ಜರುಗಿತು.

ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆಯ ವಿಜ್ಞಾಪನಾ ಪತ್ರವನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಬಿ.ಕೆ.ಮಧೂರು ದೇವಸ್ಥಾನದ ಚರಿತ್ರೆ ಬಗ್ಗೆ ಮಾಹಿತಿ ನೀಡಿದರು.

ಉದ್ಯಮಿಗಳಾದ ಕೆ.ಕೆ.ಶೆಟ್ಟಿ, ರಘುರಾಮ ಶೆಟ್ಟಿ, ತಿಂಬರೆ ಸಂಜೀವ ಶೆಟ್ಟಿ, ಕುದ್ರೆಪ್ಪಾಡಿಗುತ್ತು ಕಲ್ಪನಾಕೃಷ್ಣ ಶೆಟ್ಟಿ, ಆರ್.ಕೆ.ಶೆಟ್ಟಿ, ತೀಯಾ ಸಮಾಜದ ಬಾಬು ಬೆಳ್ಚಾಡ, ಕೊಂಡೆವೂರು ಸಮಿತಿ ಮುಂಬಯಿ ಘಟಕದ ರಾಜೇಶ್, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ಕಾರ್ತಿಕ್ ಶೆಟ್ಟಿ, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ದಯಾಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು.

2025ರ ಮಾ.27ರಿಂದ ಏ.7ರ ವರೆಗೆ ಬ್ರಹ್ಮಕಲಶೋತ್ಸವ ಜರುಗಲಿದ್ದು, ಏ.5ರಂದು ಮೂಡಪ್ಪ ಸೇವೆ ನಡೆಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net