ಉಕ್ಕಿನಡ್ಕ ಇಗರ್ಜಿಯಿಂದ ಕ್ರಿಸ್‌ಮಸ್ ಆಚರಣೆ

New Project (7)
Published on

ಪೆರ್ಲ: ಉಕ್ಕಿನಡ್ಕದ ಯೇಸುವಿನ ಪವಿತ್ರ ಹೃದಯ ದೇವಾಲಯ ವತಿಯಿಂದ ಕ್ರಿಸ್‌ಮಸ್ ಹಬ್ಬವನ್ನು ವಿವಿಧ ಇಲಾಖೆ ಕಚೇರಿಗೆ ತೆರಳಿ ಆಚರಿಸಲಾಯಿತು.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಎಣ್ಮಕಜೆ ಗ್ರಾಮ ಪಂಚಾಯಿತಿ, ಕುಂಬ್ಡಾಜೆ ಗ್ರಾಮ ಪಂಚಾಯಿತಿ, ಬದಿಯಡ್ಕ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಬದಿಯಡ್ಕ ಪೊಲೀಸ್ ಠಾಣೆ, ಅಬಕಾರಿ ಕಚೇರಿ, ವಿದ್ಯುತ್ ಇಲಾಖೆ, ಉಕ್ಕಿನಡ್ಕ ಸಹಸ್ರಾಕ್ಷ ಆಯುರ್ವೇದ ಆಸ್ಪತ್ರೆ, ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಹಾಗೂ ಉಕ್ಕಿನಡ್ಕ ಮಸೀದಿಗೆ ತೆರಳಿ ಕ್ರಿಸ್ಮಸ್ ಕೇಕ್ ವಿತರಿಸಿ ಸೌಹಾರ್ದ ಸಂದೇಶ ಸಾರಲಾಯಿತು.

ಇಗರ್ಜಿಯ ಧರ್ಮಗುರು ಫಾ.ಸುನಿಲ್ ಮಿರಾಂದಾ ನೇತೃತ್ವ ವಹಿಸಿದ್ದರು. ಪಾಲನಾ ಸಮಿತಿ ಉಪಾಧ್ಯಕ್ಷ ಜೊಯೆಲ್ ಮೊಂತೆರೋ, ಕಾರ್ಯದರ್ಶಿ ಸರಿಣಿ ಕ್ರಾಸ್ತಾ, ಸದಸ್ಯರಾದ ವಿಲ್ಫ್ರೆಡ್ ಡಿಸೋಜ, ಪಾವ್ಲ್ ಡಿಸೋಜ, ವಿವಿಧ ಇಲಾಖೆಗಳಿಗೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net