

ಗುರುಪುರ: ಇಕೋ ಕ್ಲಬ್ ಚಟುವಟಿಕೆ ಅಂಗವಾಗಿ ಕುಪ್ಪೆಪದವು ಕಿಲೆಂಜಾರಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶುಕ್ರವಾರ ವನ ಭೇಟಿ ಹಾಗೂ ಪ್ರಕೃತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕುಪ್ಪೆಪದವಿನ ಅಂಬೆಲೊಟ್ಟು, ತುಂಬೆಮಜಲು ಮತ್ತು ಬ್ರಾಹ್ಮಣರಕೋಡಿ ಅರಣ್ಯ ಪ್ರದೇಶಕ್ಕೆ ಶಿಕ್ಷಕರ ಜತೆ ತೆರಳಿದ ವಿದ್ಯಾರ್ಥಿಗಳು ಗುಡ್ಡಕಾಡಿನಲ್ಲಿ ಚಾರಣಗೈದು, ತೋಟ, ಗದ್ದೆಗಳಲ್ಲಿ ಕುಣಿದು ಕುಪ್ಪಳಿಸಿದರೆ, ಕೆರೆಯ ಶುದ್ಧ ನೀರಿನಲ್ಲಿ ಈಜಾಡಿ ಒಂದು ದಿನ ಪೂರ್ತಿ ಪ್ರಕೃತಿ ಮಡಿಲಲ್ಲಿ ಕಳೆದರು.
ಪರಿಸರ ವಾಲಿನ್ಯ ಮತ್ತು ಜಾಗೃತಿ, ವಿವಿಧ ಗಿಡಮರಗಳು, ಪ್ರಾಣಿಪಕ್ಷಿಗಳ ಪರಿಚಯ, ಭತ್ತದ ಬೆಳೆಯ ಕಟಾವು ಮಾಡುವ ವಿಧಾನದ ಬಗ್ಗೆ ಪ್ರಗತಿಪರ ಕೃಷಿಕ ಅನಿಲ್ ಕುಮಾರ್ ಅಂಬೆಲೊಟ್ಟು ಮಾಹಿತಿ ನೀಡಿದರು.