ಉತ್ತಮ ಆರೋಗ್ಯಕ್ಕೆ ರಕ್ತದಾನ ಸಹಕಾರಿ: ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಕಿವಿಮಾತು

Mul_blood
Published on

ಮೂಲ್ಕಿ: ರಕ್ತದಾನವು ನಮ್ಮ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ. ದಾನಿಯ ರಕ್ತರು ಅದೇ ಗುಂಪಿನ ರಕ್ತದ ಅಗತ್ಯವಿರುವ ಕನಿಷ್ಠ ಮೂರು ಜನರಿಗೆ ಸಹಾಯ ಮಾಡುತ್ತದೆ ಎಂದು ವಿಜಯ ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಹೇಳಿದರು.

ಮೂಲ್ಕಿ ವಿಜಯ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ರೆಡ್ ಕ್ರಾಸ್, ರೋವರ್ ಮತ್ತು ರೇಂಜರ್ಸ್ ಘಟಕಗಳು ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಉಡುಪಿ ಘಟಕ, ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆ ಸಹಯೋಗದೊಂದಿಗೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಯನ್ಸ್ ಇಂಟರ್ ನ್ಯಾಷನಲ್ ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಮಣಿಪಾಲ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಂಜಿತಾ ರಾವ್ ರಕ್ತದಾನದಿಂದ ಆಗುವ ಸಹಾಯ ಹಾಗೂ ಅದರ ಪ್ರಯೋಜನಗಳನ್ನು ವಿವರಿಸಿದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಅಧ್ಯಕ್ಷ ಶಿವಪ್ರಸಾದ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಉಪ ವ್ಯವಸ್ಥಾಪಕ ತಿಲಕ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್ ಉಪಸ್ಥಿತರಿದ್ದರು.

ವಾಶಿತಾ ಸ್ವಾಗತಿಸಿದರು. ಕಶಿಪಾ ನಿರೂಪಿಸಿದರು. ಭೂಮಿಕಾ ವಂದಿಸಿದರು.

ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು. ಇದು ವಾನವೀಯತೆಯ ಸಂಕೇತ. ನಾವು ದಾನ ವಾಡುವ ರಕ್ತವು ಅಗತ್ಯವಿರುವ ವ್ಯಕ್ತಿಗೆ ಸಹಾಯ ವಾಡುತ್ತದೆ. - ವೆಂಕಟೇಶ್ ಹೆಬ್ಬಾರ್, ಲಯನ್ಸ್ ಇಂಟರ್ ನ್ಯಾಷನಲ್ ಪ್ರಾಂತೀಯ ಅಧ್ಯಕ್ಷ. https://www.vijayavani.net/complementary-to-knowledge https://www.vijayavani.net/dipotsava-at-babakodi-punarur

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net