ವನ್ಯಜೀವಿಗಳಿಗೆ ಹೆದರದ ಅರಣ್ಯಾಧಿಕಾರಿ, ಪತಿಯ ದೌರ್ಜನ್ಯಕ್ಕೆ ಹೆದರಿದರು

suicide
Published on

ಹೈದರಾಬಾದ್​: ಅವರು ಅರಣ್ಯಾಧಿಕಾರಿಯಾಗಿ ನಿತ್ಯವೂ ವನ್ಯಜೀವಿಗಳೊಂದಿಗೆ ಒಡನಾಡುತ್ತಿದ್ದವರು. ಹಾಗಾಗಿ ಅವರಿಗೆ ವನ್ಯಜೀವಿಗಳನ್ನು ಕಂಡರೆ ಅಷ್ಟೇನೂ ಹೆದರಿಕೆ ಇರಲಿಲ್ಲ. ಆದರೆ, ಮದುವೆಯಾದ ಬಳಿಕ ಪತಿ ಕೊಡುತ್ತಿದ್ದ ಕಿರುಕುಳಕ್ಕೆ ಹೆದರಿ, ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಲಂಗಾಣದ ಮೆಹಬೂಬ್​ನಗರ ಜಿಲ್ಲೆಯ ಮೊಹಮದಾಬಾದ್​ ನಿವಾಸಿ, ಡೆಪ್ಯುಟಿ ಫಾರೆಸ್ಟ್​ ರೇಂಜ್​ ಆಫೀಸರ್​ ಆಗಿದ್ದ ವಹೀದಾ ಬೇಗಂ (32) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಮನೆಯಲ್ಲೇ ಇವರು ಬುಧವಾರ ಮಧ್ಯಾಹ್ನ ಕೀಟನಾಶಕ ಸೇವಿಸಿ ಮೃತಪಟ್ಟಿದ್ದಾರೆ. ವಿಷಸೇವಿಸಿ ಒದ್ದಾಡುತ್ತಿದ್ದಾಗ ತಕ್ಷಣವೇ ಅವರನ್ನು ಮೊಹಮ್ಮದಾಬಾದ್​ಮನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆಯೇ ಅವರು ಅಸುನೀಗಿದರು ಎಂದು ಪೊಲೀಸರು ಹೇಳಿದ್ದಾರೆ.

ಮೃತೆ ಯಾವುದೇ ಮರಣಪತ್ರ ಬರೆದಿಟ್ಟಿರಲಿಲ್ಲ. ಆದರೆ, ಅರಣಾಧಿಕಾರಿಯ ಕುಟುಂಬ ವರ್ಗದವರು, ಅರಣ್ಯ ಇಲಾಖೆಯಲ್ಲಿ ಕ್ಲರ್ಕ್​ ಆಗಿರುವ ಇವರ ಪತಿ ಹಾಗೂ ಆತನ ಮನೆಯವರ ಕಿರುಕುಳ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ತಿಳಿಸಿದ್ಧಾರೆ.

ಇದೀಗ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳನ್ವಯ ಪತಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net