

ಕಾರವಾರ: ಬಡ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಮಲ್ಟಿ ಸ್ಪೆಷಾಲಿಟಿ ಮಾಡುತ್ತೇವೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಾರವಾರ ಮೆಡಿಕಲ್ ಕಾಲೇಜ್ ನಲ್ಲಿ ಸುಲಭವಾಗಿ ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಮಾಡಬಹುದು. ನಂತರ ಹೊನ್ನಾವರದಲ್ಲಿ ಸ್ಪೆಷಾಲಿಟಿ ವ್ಯವಸ್ಥೆ ಮಾಡುತ್ತೇವೆ.
ಅತಿಕ್ರಮಣದಲ್ಲಿದ್ದವರಿಗೆ ಹಕ್ಕು ಪತ್ರ ಕೊಡಲು ಬದ್ಧರಿದ್ದೇವೆ ಎಂದರು.
ಇದನ್ನೂ ಓದಿ: ದುಷ್ಟರ ಆಟ ಬಹಳ ಕಾಲ ನಡೆಯಲ್ಲ ಎಂಬುದನ್ನು ಕರ್ನಾಟಕದ ಜನ ಸಾಬೀತು ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ
ಮೀನುಗಾರರ ಸಬ್ಸಿಡಿ ಡೀಸೆಲ್ ಹೆಚ್ಚಿಸುತ್ತೇವೆ. ಮೀನುಗಾರರಿಗೆ ಸೀಮೆ ಎಣ್ಣೆ ಸಮಸ್ಯೆ ಬಗೆಹರಿಸುತ್ತೇವೆ.
10 ಸಾವಿರ ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಬಂದರು ಅಭಿವೃದ್ಧಿ ಮಾಡಲಿದ್ದೇವೆ. ಪರಿಸರಕ್ಕೆ ತೊಂದರೆಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಮವಹಿಸಲಿದ್ದೇವೆ.
ಮುಡಗೇರಿಯಲ್ಲಿ 77 ಎಕರೆ ಜಾಗ ಭೂಸ್ವಾಧೀನವಾಗಿದೆ. 250 ಎಕರೆಗೆ ಕೈಗಾರಿಕೆ ವಲಯ ವಿಸ್ತರಣೆಗೆ ಕ್ರಮ ವಹಿಸುತ್ತೇವೆ.
ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ ಶೇ.90 ರಷ್ಟು ಜನರಿಗೆ ವಿದ್ಯುತ್ ಬಿಲ್ ಬಂದಿಲ್ಲ. ಯೋಜನೆ ಜಾರಿಗೆ ತಂದಿದ್ದೇವೆ.
ಆಕರ್ಷಕ ಪಥ ಸಂಚಲನ
ಪೊಲೀಸ್, ಅರಣ್ಯ, ಎನ್ ಸಿಸಿ ಸೇರಿ 16 ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಯಿತು. ಅದಕ್ಕೂ ಪೂರ್ವದಲ್ಲಿ ಉಸ್ತುವಾರಿ ಸಚಿವರು ತೆರೆದ ಜೀಪ್ ನಲ್ಲಿ ತೆರಳಿ ತುಕಡಿಗಳ ಸಿದ್ಧತೆ ಪರಿಶೀಲಿಸಿದರು.
ಶಾಸಕ ಸತೀಶ ಸೈಲ್, ಎಂಎಲ್ ಸಿ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್ ಪಿ ಎನ್.ವುಷ್ಣುವರ್ಧನ, ಡಿಎಫ್ ಒ ಪ್ರಶಾಂತ ಕುಮಾರ ಇದ್ದರು.