ಟ್ರಾಫಿಕ್ ಸಮಸ್ಯೆಗಳಿಗೂ 112ಗೆ ಕರೆ ಮಾಡಿ; ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ

112 Helpline
Published on

ಬೆಂಗಳೂರು : ಸಂಚಾರ ದಟ್ಟಣೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ರಸ್ತೆ ಅಪಘಾತ ಹೀಗೆ ಸಂಚಾರ ಸಮಸ್ಯೆಗಳ ಬಗ್ಗೆ ಇನ್ನುಂದೆ ನಮ್ಮ-112ಗೆ (ಪೊಲೀಸ್ ನಿಯಂತ್ರಣ ಕೊಠಡಿ) ನಾಗರಿಕರು ಕರೆ ಮಾಡಿ ಪೊಲೀಸರ ಸಹಾಯ ಪಡೆಯಬಹುದು.

ಇದುವರೆಗೆ ಕಳ್ಳತನ, ಕೊಲೆ, ಕಿರುಕುಳ ಮತ್ತು ರೋಡ್ ರೋಮಿಯೋಗಳ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸೈಬರ್ ಅಪರಾಧ ಸಂಬಂಧ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ದೂರು ಕೊಡುವ ಅವಕಾಶ ಇತ್ತು. ಇನ್ಮುಂದೆ ಸಂಚಾರ ಸಮಸ್ಯೆಗಳಿಗೂ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದಾಗಿದೆ.

ಇತ್ತೀಚಿಗೆ ಮಲ್ಲೇಶ್ವರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ನಾಗರಿಕರೊಬ್ಬರು ಸಲಹೆ ಮೇರೆಗೆ ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ ನಮ್ಮ112 ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡು ಕೊಳ್ಳಲು ಅನುವು ಮಾಡಲಾಗಿದೆ. ಈ ರೀತಿಯ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರ ವಾಹನ ಮೇಲಿನ ಸಂಚಾರ ವಿಭಾಗದ ಸಿಬ್ಬಂದಿ (ಕೋಬ್ರಾ) ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net