ಈ ಕಾಕ್‌ಟೈಲ್ ಬೆಲೆ ಬರೋಬ್ಬರಿ 10 ಲಕ್ಷ ರೂ.! ವಿಶೇಷತೆ ಏನು ಗೊತ್ತಾ?

ಅಮೆರಿಕಾ: ಹೋಟೆಲ್ ವ್ಯವಸ್ಥಾಪಕರು ಗ್ರಾಹಕರನ್ನು ಆಕರ್ಷಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ಇತ್ತೀಚೆಗೆ ಕಾಕ್‌ಟೈಲ್‌ಗೆ ಸಂಬಂಧಿಸಿದ ಸುದ್ದಿ ವೈರಲ್ ಆಗುತ್ತಿದೆ.

ಅಮೆರಿಕದ ರೆಸ್ಟೊರೆಂಟ್‌ನ ಮೆನುವಿನಲ್ಲಿ ಹೊಸ ರೀತಿಯ ಕಾಕ್‌ಟೈಲ್‌ನ ಬೆಲೆ 10 ಲಕ್ಷ ರೂ. ಎಂಬುದು ಗಮನಾರ್ಹ. ಈ ಕಾಕ್‌ಟೈಲ್‌ನ ವಿಶೇಷತೆ ಏನು? ಎಂದು ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಅಡಾಲಿನಾ ಬಿವರೇಜ್‌ನ ಖ್ಯಾತ ಚೆಫ್ ಅಲುಮ್ ಸೂ ಅಹ್ನ್ ಹಾಗೂ ಸ್ಥಳೀಯ ಖ್ಯಾತ ಜ್ಯೂವೆಲ್ಲರಿ ಬ್ರ್ಯಾಂಡ್ ಮ್ಯಾರೋ ಫೈನ್ ಸಹಭಾಗಿತ್ವದಲ್ಲಿ ಈ ಕಾಕ್‌ಟೈಲ್ ಡ್ರಿಂಕ್ ತಯಾರಿಸಿ ರೆಸ್ಟೋರೆಂಟ್‌ನಲ್ಲಿ ಪರಿಚಯಿಸಿದೆ. ಇದೀಗ ವಿಶ್ವದ ಅತ್ಯಂತ ದುಬಾರಿ ಕಾಕ್‌ಟೈಲ್ ಡ್ರಿಂಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾಕ್‌ಟೈಲ್‌ನ ಹೆಸರು ಮ್ಯಾರೋ ಮಾರ್ಟಿನಿ. ಅಮೆರಿಕದ ಚಿಕಾಗೋದಲ್ಲಿರುವ ಅಡಾಲಿನಾ ಎಂಬ ರೆಸ್ಟೋರೆಂಟ್ ಇತ್ತೀಚೆಗೆ ಹೊಚ್ಚ ಹೊಸ ಕಾಕ್‌ಟೈಲ್ ಅನ್ನು ಪರಿಚಯಿಸಿದೆ.

ಅತ್ಯಂತ ಖ್ಯಾತ ಹೇರ್ಲೂಮ್ ಟೊಮ್ಯಾಟೋ ನೀರು, ನಿಂಬೆ ಹಣ್ಣು, ಬಸಿಲ್ ಸೊಪ್ಪು, ಆಲಿವ್ ಆಯಿಲ್, ಚಿಲ್ಲಿ ಲಿಕ್ವೆರ್ ಮಿಶ್ರಣ ಮಾಡಿ ಈ ಕಾಕ್‌ಟೈಲ್ ತಯಾರಿಸಲಾಗುತ್ತದೆ. ಈ ಕಾಕ್‌ಟೈಲ್‌ ಬೆಲೆ 13 ಸಾವಿರ ಡಾಲರ್. ನಮ್ಮ ಕರೆನ್ಸಿಯಲ್ಲಿ ರೂ. 10 ಲಕ್ಷ. ಆದರೆ ಈ ಕಾಕ್‌ಟೈಲ್‌ ತಯಾರಿಕೆಯು ಸರಳವಾಗಿದ್ದರೂ, ಅದನ್ನು ಬಡಿಸುವುದು ವಿಭಿನ್ನವಾಗಿದೆ.

ಕಾಕ್‌ಟೈಲ್‌ 150 ವಜ್ರಗಳಿಂದ ಕೂಡಿದ 14 ಕ್ಯಾರೆಟ್ ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ. ಅದಕ್ಕಾಗಿಯೇ ಈ ಕಾಕ್ಟೈಲ್ ತುಂಬಾ ದುಬಾರಿಯಾಗಿದೆ. ಈ ವಜ್ರಖಚಿತ ನೆಕ್ಲೇಸ್ ಅನ್ನು ‘ಮಾರೊಫೈನ್’ ಎಂಬ ಚಿನ್ನದ ಆಭರಣ ಕಂಪನಿ ವಿನ್ಯಾಸಗೊಳಿಸಿದೆ. ಹೀಗೆ ತಯಾರಾದ ಪಾನೀಯವನ್ನು ಅತ್ಯಂತ ಆಕರ್ಷಕವಾಗಿ ಅಲಂಕರಿಸಿದ ಗಾಜಿನಲ್ಲಿ ಬಡಿಸಲಾಗುತ್ತದೆ. ಸದ್ಯ ಈ ಕಾಕ್‌ಟೈಲ್‌ಗೆ ಸಂಬಂಧಿಸಿದ ಸುದ್ದಿ ವೈರಲ್ ಆಗುತ್ತಿದೆ.

ಆರ್ಡರ್ ಮಾಡುವ ಗ್ರಾಹಕನ ವಿಶೇಷ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯ ಮಾಡಲಾಗುತ್ತದೆ. ಇದಕ್ಕಾಗಿ ಈ ಡ್ರಿಂಕ್ ಜೊತೆ ಮ್ಯಾರೋ ಫೈನ್ ಜ್ಯೂವೆಲ್ಲರಿ ಈ ಡ್ರಿಂಕ್‌ಗಾಗಿ ತಯಾರಿಸಿರುವ 9 ಕಾರೆಟ್ ಡೈಮೆಂಟ್ ಟೆನಿಸ್ ಚೈನ್ ನೀಡಲಾಗುತ್ತದೆ. ಈ ಚೈನ್‌ನಲ್ಲಿ 150 ಡೈಮಂಡ್ಸ್ ಹಾಗೂ 14 ಕಾರೆಟ್ ಚಿನ್ನ ಇರಲಿದೆ.

ಈ ಊರಲ್ಲಿ ಪ್ರತಿಯೊಬ್ಬರ ಬಳಿಯೂ ಇದೇ ಖಾಸಗಿ ಜೆಟ್ ! ತರಕಾರಿ ತರಬೇಕೆಂದ್ರು ಇದ್ರಲ್ಲೇ ಪ್ರಯಾಣ ಮಾಡ್ತಾರೆ..

TAGGED:
Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…