

Recipe: ಪ್ರಸ್ತುತ, ಶ್ರಾವಣ ಮಾಸ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಶಿವನ ಭಕ್ತರು ಪೂಜೆಯಲ್ಲಿ ತಲ್ಲೀನರಾಗಿರುತ್ತಾರೆ. ಶ್ರಾವಣ ಸೋಮವಾರವನ್ನು ಭಕ್ತರು ಅತ್ಯಂತ ವಿಶೇಷವೆಂದು ಪರಿಗಣಿಸಿ ಪೂಜೆ, ಉಪವಾಸ ಮಾಡುತ್ತಾರೆ. ಈ ವೇಳೆ ಶಿವನನ್ನು ಪೂಜಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಿಕೆ ಇದೆ.
ಶ್ರಾವಣ ಸೋಮವಾರದಂದು ಉಪವಾಸ ಮಾಡುವವರು ಸಾಮಾನ್ಯವಾಗಿ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ಅಂತವರಿಗಾಗಿಯೇ ನಾವು ಇಂದು ಸಾಬುದಾನಿನ ಕಿಚಿಡಿ ಮಾಡುವ ವಿಧಾನವನ್ನು ತಿಳಿಸಿಕೊಡಲಿದ್ದೇವೆ.
ಬೇಕಾಗುವ ಪದಾಥರ್ಗಳು:
1 ಕಪ್ ಸಾಬುದಾನ್
1 ಲೀಟರ್ ಕೆನೆಭರಿತ ಹಾಲು
1-2 ಚಮಚ ತುಪ್ಪ
1/2 ಚಮಚ ಸಕ್ಕರೆ
5-10 ಬಾದಾಮಿ
8-10 ಒಣದ್ರಾಕ್ಷಿ
8-10 ಗೋಡಂಬಿ
1 ಚಮಚ ಏಲಕ್ಕಿ ಪುಡಿ
2-3 ಕೇಸರಿ ದಳ
ಮಾಡುವ ವಿಧಾನ :
ಸಾಬುದಾನನ್ನು ಚೆನ್ನಾಗಿ ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಬಿಡಬೇಕು. ನಂತರ ಈ ಸಾಬುದಾನನ್ನೂ ಬಸಿದು ಬಟ್ಟಲಿನಲ್ಲಿ ಹರಡಬೇಕು. ನಂತರ ಒಂದು ಕಡಾಯಿಯಲ್ಲಿ ಹಾಲನ್ನು ಹಾಕಿ ಅದು ಅರ್ಧಭಾಗ ಆಗುವವರೆಗೂ ಚೆನ್ನಾಗಿ ಕುದಿಸಬೇಕು. ಹಾಲಿಗೆ ಸಾಬೂನುದಾನವನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಆ ಮಿಶ್ರಣ ದಪ್ಪವಾಗುವವರೆಗೂ ಬೇಯಿಸಿದ ನಂತರ ಸಣ್ಣಗೆ ಹೆಚ್ಚಿದ ಡ್ರೈಫ್ರೂಟ್ಗಳನ್ನು ಬೆರೆಸಬೇಕು. ಕಡಿಮೆ ಉರಿಯಿಟ್ಟು ಚೆನ್ನಾಗಿ ಬೆಂದ ನಂತರ ಏಲಕ್ಕಿ ಪುಡಿ ಹಾಗೂ ಕೇಸರಿ ದಳಗಳನ್ನು ಹಾಕಿ ಬೆರೆಸಿ ಸ್ವಲ್ಪ ಸಮಯ ಫ್ರಿಜ್ನಲ್ಲಿಟ್ಟು, ತಣ್ಣಗಾದ ನಂತರ ರುಚಿಯಾದ ಸಾಬುದಾನಿನ ಕಿಚಡಿ ಸವಿಯಿರಿ.