ಒಳ್ಳೆದ್ದೋ, ಕೆಟ್ಟದ್ದೋ ಭವಿಷ್ಯದಲ್ಲಿ ಪಾಕಿಸ್ತಾನ ಜತೆ ನಿಲ್ತೇವೆ: ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ | Turkish

blank

Turkish: ಟರ್ಕಿ ದೇಶದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಅಮದು ಸೇರಿದಂತೆ ಟರ್ಕಿ ವಸ್ತುಗಳ ಬಹಿಷ್ಕಾರದ ಕೂಗುಗಳು ನಡೆಯುವೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಟರ್ಕಿ-ಪಾಕಿಸ್ತಾನ ಸಹೋದರತ್ವವನ್ನು ದ್ವಿಗುಣಗೊಳಿಸುವ ಮಾತುಗಳನ್ನಾಡಿದ್ದಾರೆ.

blank

ಇದನ್ನೂ  ಓದಿ:ಭಾರತದಲ್ಲಿ ಆಪಲ್ ಸಂಸ್ಥೆ ನಿರ್ಮಾಣ ಮಾಡುವುದು ನನಗೆ ಇಷ್ಟವಿಲ್ಲ; ಡೊನಾಲ್ಡ್ ಟ್ರಂಪ್ | Donald-trump

ಹಿಂದೆನಂತೆ ಭವಿಷ್ಯದಲ್ಲಿ ಕೂಡ ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲಿ ಕೂಡ ಜತೆಗಿದ್ದೇವೆ. ಇದನ್ನೂ ಮುಂದುವರೆಸುವೆ ಎಂದಿದ್ದಾರೆ. ಅಲ್ಲದೆ, ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಶರೀಫ್​ ಸಂದೇಶಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಗುರುವಾರ ವರದಿಯಾಗಿದೆ.

ಇದನ್ನೂ  ಓದಿ:ಮಾತೃಭಾಷಾ ಶಿಕ್ಷಣದೊಂದಿಗೆ ಆಂಗ್ಲಭಾಷಾ ಕಲಿಕೆ: ಡಾ.ಪಾರ್ವತಿ ಜಿ.ಐತಾಳ್ ಅಭಿಮತ

ಪಾಕಿಸ್ತಾನ ವಿರುದ್ಧ ಆಪರೇಷನ್​ ಸಿಂಧೂರ ಕಾರ್ಯಚರಣೆ ವೇಳೆ ಟರ್ಕಿ ಪಾಕಿಸ್ತಾನಕ್ಕೆ ಮಿಲಿಟರಿ ಡ್ರೋನ್‌ಗಳನ್ನು ಮಾತ್ರವಲ್ಲದೆ, ತನ್ನ ಸೇನಾ ಪಡೆಯ ಕಾರ್ಯಕರ್ತರನ್ನೂ ಸಹ ಒದಗಿಸಿದೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಇತ್ತೀಚಿಗೆ ವರದಿಯಾಗಿದೆ. ಅಲ್ಲದೆ, ಸುದ್ದಿಗೋಷ್ಠಿಯಲ್ಲಿ ಕರ್ನಲ್​​ ಸೋಫಿಯಾ ಖುರೇಷಿ ಕೂಡ ಟರ್ಕಿ ಡ್ರೋನ್​ ಬಗ್ಗೆ ಉಲ್ಲೇಖಿಸಿದ್ದರು.

ಭಾರತೀಯರ ಕೋಪಕ್ಕೆ ಕಾರಣವೇನು..?

ಆಪರೇಷನ್ ಸಿಂಧೂರ ಭಾಗವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದಾಗ, ಇಸ್ಲಾಮಾಬಾದ್-ರಾವಲ್ಪಿಂಡಿ ಸ್ಥಾಪನೆಯು ಭಾರತೀಯ ಮಿಲಿಟರಿ ಮತ್ತು ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಪಾಕಿಸ್ತಾನವು ಟರ್ಕಿಶ್ ಡ್ರೋನ್‌ಗಳೊಂದಿಗೆ ಭಾರತದ ವೈಮಾನಿಕ ರಕ್ಷಣೆಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಅದು ಭಾರತದ ವಿರುದ್ಧ ಬೇರಕ್ತಾರ್ TB2 ಮತ್ತು YIHA ಡ್ರೋನ್‌ಗಳನ್ನು ಬಳಸಿದೆ ಎಂದು ವರದಿಯಾಗಿದೆ. ಆದರೆ, ಟರ್ಕಿ ಕೇವಲ ಮಿಲಿಟರಿ ಉಪಕರಣಗಳನ್ನು ಮಾತ್ರವಲ್ಲದೆ ಟರ್ಕಿಶ್ ಕಾರ್ಯಕರ್ತರನ್ನೂ ಪೂರೈಸಿದ್ದು ಭಾರತೀಯರ ಕೋಪವನ್ನು ಹೆಚ್ಚಿಸಿತು.

“ಬಾಯ್ಕಾಟ್ ಟರ್ಕಿ” ಎಂಬ ಹ್ಯಾಶ್‌ಟ್ಯಾಗ್ ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದು , ಭಾರತೀಯರು ತಮ್ಮನ್ನು ವಂಚಿಸಲಾಗುತ್ತಿದೆ ಎಂದು ಭಾವಿಸುತ್ತಿದ್ದಾರೆ. 2023ರ ಬೃಹತ್ ಭೂಕಂಪದ ನಂತರ ಟರ್ಕಿಗೆ ಸಹಾಯ ಮಾಡಲು ಭಾರತ ಆಪರೇಷನ್ ದೋಸ್ತ್ ನಡೆಸಿತು, ಆದರೆ ಪಾಕಿಸ್ತಾನಕ್ಕೆ ಡ್ರೋನ್‌ಗಳ ಮೂಲಕ ಪ್ರತಿಯಾಗಿ ಬೆಂಬಲ ನೀಡಿತು.(ಏಜೆನ್ಸೀಸ್​)

ಪಾಕಿಸ್ತಾನ ಪರಮಾಣು ಸೌಲಭ್ಯದಲ್ಲಿ ವಿಕಿರಣ ಸೋರಿಕೆ!: ಪರಮಾಣು ಶಕ್ತಿ ಸಂಸ್ಥೆ ಹೇಳಿದ್ದೇನು? | IAEA

ಭಾರತದಲ್ಲಿ ಆಪಲ್ ಸಂಸ್ಥೆ ನಿರ್ಮಾಣ ಮಾಡುವುದು ನನಗೆ ಇಷ್ಟವಿಲ್ಲ; ಡೊನಾಲ್ಡ್ ಟ್ರಂಪ್ | Donald-trump

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank