

ಮುಂಬೈ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಆತ ನಿಗದಿತ ವೇಳೆಗೆ ತವರಿಗೆ ಮರಳಬೇಕಿತ್ತು. ಆದರೆ, ಆಗಿದ್ದೇ ಬೇರೆ. ಮಾರ್ಚ್ ಮಧ್ಯದಲ್ಲಿ ಕೇರಳದಲ್ಲಿ ಫುಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸಿ, ಸಹ ಆಟಗಾರರಿಗೆ ಗುಡ್ಬೈ ಹೇಳಿ ಬಂದ ಘಾನ ದೇಶದ ಆಟಗಾರ ಮುಂಬೈ ಮೂಲಕ ವಿಮಾನದಲ್ಲಿ ತವರಿಗೆ ಮರಳಲು ಬಯಸಿದ್ದ. ಆದರೆ, ಅಷ್ಟೊತ್ತಿಗಾಗಲೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಅನಿವಾರ್ಯವಾಗಿ ಏರ್ ಪೋರ್ಟ್ನಲ್ಲೇ ದಿನದೂಡಬೇಕಾಯಿತು. ಅದು ಬರೋಬ್ಬರಿ 73 ದಿನ...
ಇದನ್ನೂ ಓದಿ: VIDEO: ಐಪಿಎಲ್ ಹಿಂದೆ ಓಡುತ್ತಿದ್ದಾರಂತೆ ಕೊಹ್ಲಿ…!
ಇದನ್ನೂ ಓದಿ: ಗೌರವ ಕೊಟ್ಟರೆ ಏಪ್ರಿಲ್ ಫೂಲ್ ಎಂದುಕೊಂಡ ಕ್ಲಾರ್ಕ್…!
ಈ ವೇಳೆ ಹಿಂದಿ ಸಿನಿಮಾ ವೀಕ್ಷಿಸುವುದೇ ಅವರ ಕಾಯವಾಗಿದ್ದಂತೆ. ‘ಮನೆಯವ್ರಿಗೆ 20 ದಿನ ಫೋನ್ ಸಂಪರ್ಕ ಸಿಕ್ಕಿರಲಿಲ್ಲ. ಬಳಿಕ ಫೋನ್ ಮಾಡಿದರೆ, ನಾನು ಸತ್ತು ಹೋಗಿದ್ದೆ ಎಂದು ಭಾವಿಸಿದ್ದರಂತೆ’ ಎಂದು ಭಾವುಕರಾಗುತ್ತಾರೆ ಜಾನ್. ಸ್ಥಳೀಯರು ತುಂಬಾ ಸಹಾಯ ಮಾಡಿದರೂ ಅವರ ಸ್ನೇಹವನ್ನು ಎಂದೂ ಮರೆಯಲಾರೆ ಎನ್ನುತ್ತಾರೆ. ಇದೀಗ ಮಹಾರಾಷ್ಟ್ರ ಸರ್ಕಾರದ ಸಂಪರ್ಕ ಸಾಧಿಸಿರುವ ಘಾನಾ ರಾಯಭಾರಿ ಕಚೇರಿ, ವಿಮಾನಯಾನ ಆರಂಭಗೊಂಡರೆ ಮೊದಲ ವಿಮಾನದಲ್ಲೇ ಜಾನ್ರನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸ್ಥಳೀಯ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ.