ಬೆಂಗಳೂರು‘: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ತನ್ನ ನೂತನ ರೆಸಿಡೆನ್ಶಿಯಲ್ ಅಕಾಡೆಮಿಯನ್ನು ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸುತ್ತಿದ್ದು, ಬೆಂಗಳೂರಿನ ಹಲಸೂರಿನಲ್ಲಿರುವ ತನ್ನ ಕ್ಲಬ್ ನಲ್ಲಿ ಈ ಮುಕ್ತ ಟ್ರಯಲ್ಸ್ ನಡೆಯಲಿದೆ. ಎಸ್ಯುಎಫ್ಸಿನ (SUFC) ಮುಂಬರುವ ರೆಸಿಡೆನ್ಶಿಯಲ್ ಅಕಾಡೆಮಿಗೆ ಆಟಗಾರರನ್ನು ಆಯ್ಕೆ ಮಾಡುವುದು ಈ ಟ್ರಯಲ್ಸ್ ಮುಖ್ಯ ಉದ್ದೇಶವಾಗಿದೆ. ಯುವ ಫುಟ್ಬಾಲ್ ಆಟಗಾರರಿಗೆ ಉತ್ತಮ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ಈ ಅಕಾಡೆಮಿಯು ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೇ ಆಧುನಿಕ ಸೌಲಭ್ಯಗಳು, ಪರಿಣಿತ ಕೋಚಿಂಗ್, ಮತ್ತು ವೃತ್ತಿಪರ ಫುಟ್ಬಾಲ್ ಗೆ ಮಾರ್ಗವನ್ನು ಒದಗಿಸುತ್ತದೆ.

ಆಧುನಿಕ ಸೌಲಭ್ಯಗಳು ಮತ್ತು ಪರಿಣಿತ ತರಬೇತಿಯೊಂದಿಗೆ ಸುಸಜ್ಜಿತವಾದ ಎಸ್ಯುಎಫ್ಸಿ ರೆಸಿಡೆನ್ಶಿಯಲ್ ಅಕಾಡೆಮಿ ಆಟಗಾರರನ್ನು ಕೇವಲ ಉತ್ತಮ ಫುಟ್ಬಾಲರ್‌ಗಳಾಗಿ ಮಾತ್ರವಲ್ಲ, ವೃತ್ತಿಪರ ಜೀವನಕ್ಕೆ ಸಿದ್ಧರಾಗುವ ಪರಿಪೂರ್ಣ ವ್ಯಕ್ತಿಗಳಾಗಿಯೂ ರೂಪಿಸಲು ಕಾರ್ಯ ನಿರ್ವಹಿಸುತ್ತದೆ. ಸ್ಪರ್ಧಾತ್ಮಕ ದರಗಳಲ್ಲಿ, ಆಟಗಾರರಿಗೆ ವೃತ್ತಿಪರ ಪಥವನ್ನು ರೂಪಿಸುವ ಅವಕಾಶವನ್ನು ಈ ಅಕಾಡೆಮಿ ನೀಡಲಿದೆ.
ಪ್ರತಿಭಾವಂತ ಆಟಗಾರರನ್ನು ಹುಡುಕಲು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅನೇಕ ರಾಜ್ಯಗಳಲ್ಲಿ ಓಪನ್ ಟ್ರಯಲ್ಸ್ ಆಯೋಜಿಸುತ್ತಿದೆ. ಫೆಬ್ರವರಿ 15ರಂದು ಬೆಂಗಳೂರಿನ ಹಲಸೂರಿನಲ್ಲಿರುವ ಎಸ್ಯುಎಫ್ಸಿಯಲ್ಲಿ ಪ್ರಥಮ ಓಪನ್ ಟ್ರಯಲ್ಸ್ ನಡೆಯಲಿದ್ದು ಬಳಿಕ ಮಾರ್ಚ್ 1 ಮತ್ತು 2 ರಂದು ಪುಣೆಯ ಬವ್ಧಾನ್ ಮತ್ತು ಖರಾಡಿಯಲ್ಲಿ ಟ್ರಯಲ್ಸ್ ನಡೆಯಲಿವೆ. 11 ರಿಂದ 18 ವರ್ಷ ವಯಸ್ಸಿನ ಎಲ್ಲ ಯುವ ಫುಟ್ಬಾಲ್ ಆಟಗಾರರು ಓಪನ್ ಟ್ರಯಲ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಈ ಟ್ರಯಲ್ಸ್ ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಸ್ಯುಎಫ್ಸಿ ಅಕಾಡಮಿಯಲ್ಲಿ ಸ್ಥಾನ ಪಡೆಯಬಹುದಾಗಿದೆ.
ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನ ಸಿಇಒ ಮೊಹಮದ್ ರಫಿಕ್ ಅವರು ಯುವ ಫುಟ್ಬಾಲ್ ಆಟಗಾರರಿಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದಾರೆ. ‘ ಎಲ್ಲ ಅರ್ಹ ಫುಟ್‌ಬಾಲ್ ಆಟಗಾರರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಅಕಾಡೆಮಿಯ ಭಾಗವಾಗಲು ಈ ಟ್ರಯಲ್ಸ್ ಅನ್ನು ಆಯೋಜಿಸಲಾಗಿದೆ. ಈ ಟ್ರಯಲ್ಸ್ ಯುವ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯದಲ್ಲಿ ವೃತ್ತಿಪರ ತರಬೇತಿ ಪಡೆಯುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಫುಟ್‌ಬಾಲ್ ವೃತ್ತಿಜೀವನದತ್ತ ಮೊದಲ ಹೆಜ್ಜೆ ಇಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ‘ ಎಂದಿದ್ದಾರೆ. ಎಸ್ಯುಎಫ್ಸಿ ರೆಸಿಡೆನ್ಶಿಯಲ್ ಅಕಾಡೆಮಿ ಟ್ರಯಲ್ಸ್ ಗಳಿಗೆ ನೋಂದಾಯಿಸಲು, ಎಸ್ಯುಎಫ್ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
2012ರಿಂದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ 13,000 ಕ್ಕೂ ಹೆಚ್ಚು ಫುಟ್‌ಬಾಲ್ ಆಟಗಾರರಿಗೆ ತರಬೇತಿ ನೀಡಿದೆ. ಬಿಡಿಎಫ್ಎ ಎ ಡಿವಿಷನ್ ಚಾಂಪಿಯನ್‌ಶಿಪ್, ಬಿಡಿಎಫ್ಎ ಸೂಪರ್ ಡಿವಿಷನ್‌ನಲ್ಲಿ ನಾಲ್ಕು ಬಾರಿ ಟಾಪ್-2 ಸ್ಥಾನವನ್ನು ಪಡೆದಿದ್ದು, 2ನೇ ಡಿವಿಷನ್ I-ಲೀಗ್‌ನಲ್ಲಿ ಭಾಗವಹಿಸಿದೆ. ಎಸ್ಯುಎಫ್ಸಿಯು 13, 15, 17 ವಯೋಮಿತಿ ವಿಭಾಗಗಳಲ್ಲಿ ಮೂರು ಎಲೈಟ್ ಯುವ ತಂಡಗಳನ್ನು ಹೊಂದಿದ್ದು, ಜೊತೆಗೆ ಹಿರಿಯ ಪುರುಷರ ತಂಡವನ್ನೂ ಕೂಡ ಹೊಂದಿದೆ. ಭಾರತದಲ್ಲಿ ಸುಸ್ಥಿರ ಫುಟ್‌ಬಾಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ರೆಸಿಡೆನ್ಶಿಯಲ್ ಅಕಾಡೆಮಿಯ ಮಹತ್ವದ ಹೆಜ್ಜೆಯಾಗಿದೆ. ಇಲ್ಲಿ ಆಟಗಾರರು, ತರಬೇತುದಾರರು ಮತ್ತು ವೃತ್ತಿಪರರು ಕ್ರೀಡೆಯಲ್ಲಿ ಅಭಿವೃದ್ಧಿ ಹೊಂದಬಹುದು ಮತ್ತು ಉತ್ತಮ ಸಾಧನೆ ಮಾಡಬಹುದಾಗಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ ಔಟ್; ಜೈಸ್ವಾಲ್ ಬದಲಿಗೆ 5ನೇ ಸ್ಪಿನ್ನರ್ಗೆ ಸ್ಥಾನ!