ಅಜ್ವಾನ ವರ್ಸಸ್​ ಸೋಂಪು; ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗೆ ಯಾವುದು ಬೆಸ್ಟ್?..Ajwain vs Saunf Water

ಅಜ್ವಾನ ವರ್ಸಸ್​ ಸೋಂಪು; ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗೆ ಯಾವುದು ಬೆಸ್ಟ್?..Ajwain vs Saunf Water
Published on: 
  • ಹೊಟ್ಟೆಯುಬ್ಬರ ಕಾಣಿಸಿಕೊಂಡಾಗ ಅಜ್ವಾನ, ಸೋಂಪು ಯಾವ ನೀರು ಬೆಸ್ಟ್?.

  • ಸೋಂಪು ಮತ್ತು ಅಜ್ವಾನ ನೀರನ್ನು ಕುದಿಸಿ ಕುಡಿಯುವುದು ಜೀರ್ಣಕ್ರಿಯೆಗೆ ಬೆಸ್ಟ್ ಆಯ್ಕೆ.

  • ಸೋಂಪು ಹೊಟ್ಟೆಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಚಿಕನ್​, ಮಟನ್​ನಂತಹ ಭಾರಿ ಆಹಾರ ಅಥವಾ ಅತಿಯಾಗಿ ಎಣ್ಣೆ ಬಳಸಿದ ಆಹಾರ ಸೇವಿಸಿದಾಗ ಹೊಟ್ಟೆಯುಬ್ಬರದಂತಾಗಿ, ಭಾರವಾದಂತೆ ಭಾಸವಾಗೋದು ಸಹಜ. ಹೀಗಾಗಿ ಅಂಗಡಿಯಲ್ಲಿ ಸಿಗುವ ಬಿಂದು, ಸ್ಪ್ರೈಟ್​​ ಎಲ್ಲ ಜ್ಯೂಸ್​ಗಳ ಪ್ರಯೋಗ ಮಾಡಿಬಿಡುತ್ತೇವೆ. ಆದರೆ, ರಾಸಾಯನಿಕ ಭರಿತ ಈ ಪೇಯವನ್ನು ಹೊಟ್ಟೆಗೆ ಇಳಿಸಿಕೊಳ್ಳೋದು ಅಷ್ಟು ಉತ್ತಮವಾದದ್ದಲ್ಲ. ಸಕ್ಕರೆ ಅಂಶ ಹೆಚ್ಚಿಸುತ್ತದೆ ಎನ್ನುವುದು ವೈದ್ಯರ ವಾದ. ಹೀಗಾಗಿ ಹಿರಿಯರು ಈ ಹಿಂದೆ ಅಜ್ವಾನ, ಸೋಂಪು, ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಕುಡಿಯುತ್ತಿದ್ದರು. ಇದೊಂದ ಭಾರತದ ದೇಸಿ ಮದ್ದು.

ಅಜ್ವಾನ, ಸೋಂಪು, ಜೀರಿಗೆ ಈ ಮೂರರಲ್ಲಿ ಯಾವುದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಎನ್ನುವುದು ಗೊಂದಲ. ಹೀಗಾಗಿ ಇಂದು ಅಜ್ವಾನ ಹಾಗೂ ಸೋಂಪು ಎರಡಲ್ಲಿರುವ ಆರೋಗ್ಯಕಾರಿ ಅಂಶ. ಹೊಟ್ಟೆಯುಬ್ಬರ, ಭಾರವಾದಂತೆ ಭಾಸವಾದಾಗ, ಗ್ಯಾಸ್ಟಿಕ್​ ಸಮಸ್ಯೆಯಾದಾಗ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಈ ಲೇಖನದಲ್ಲಿ ಇದೆ.

ಅಜ್ವಾನ ಕಾಳುಗಳು

ಅಜ್ವಾನದಲ್ಲಿರುವ ಥೈಮೋಲ್ ಎನ್ನುವ ನೈಸರ್ಗಿಕ ಅಂಶವು ಅತಿಯಾಗಿ ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬರದಂತಹ ಸಮಸ್ಯೆಗೆ ಭಾರತೀಯರಿಗೆ ಅದರಲ್ಲಿಯೂ ದಕ್ಷಿಣ ಭಾರತೀಯರಿಗೆ ಅಜ್ವಾನ ಒಂದು ದೇಸಿ ಮದ್ದು. 2017ರ ವೈದ್ಯಕೀಯ ಅಧ್ಯಯನದ ಪ್ರಕಾರ ಅಜ್ವಾನ ಮತ್ತು ಸೋಂಪು ಜೀರ್ಣಾಂಗ ಸಮಸ್ಯೆಯನ್ನು ಆ ಸುಧಾರಿಸಲು ಸಹಾಯ ಮಾಡುತ್ತದೆ ಎನ್ನುವುದು ಬೆಳಕಿಗೆ ಬಂದಿದೆ. ಆದರೆ, ಅಜ್ವಾನ ಮಾತ್ರ ಕುದಿಸಿ ಕುಡಿದರೆ ಪರಿಣಾಮಕಾರಿಯಾಗಿ ಫಲಿತಾಂಶ ನೀಡುತ್ತದೆಯೇ ಎನ್ನುವ ಮಾಹಿತಿ ಇಲ್ಲ.

ಇದನ್ನೂ ಓದಿ: ಮೊಟ್ಟೆ ವರ್ಸಸ್ ಸೋಯಾ ಚಂಕ್ಸ್: ಆರೋಗ್ಯಕ್ಕೆ ಯಾವುದು ಬೆಸ್ಟ್?..Eggs vs Soya Chunks

ಸೋಂಪಿನಿಂದ ಸಿಗುವ ಲಾಭ

ಸೋಪಿನಲ್ಲಿ ಅನೆಥೋಲ್​ ಎನ್ನುವ ನೈಸರ್ಗಿಕ ಅಂಶವಿದೆ. ಇದು ಹೊಟ್ಟೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಕಚ್ಚಾ ಸೋಂಪು ಅಥವಾ ಸೋಂಪು ಹಾಕಿ ಕುದಿಸಿದ ಬೆಚ್ಚಗಿನ ನೀರನ್ನು ಸೇವನೆ ಮಾಡಲಾಗುತ್ತದೆ. ವೈಜ್ಞಾನಿಕ ಅಧ್ಯಯನದ ಪ್ರಕಾರ ಬಿಸಿಯಾದ ಸೋಂಪಿನ ನೀರು ರೋಗಿಯ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವುದು ಬೆಳಕಿಗೆ ಬಂದಿದೆ.

ಗ್ಯಾಸ್, ಹೊಟ್ಟೆ ಬಿಗಿತ ಮತ್ತು ತೀವ್ರವಾದ ಜೀರ್ಣಕ್ರಿಯೆ ಸಮಸ್ಯೆಗೆ ಅಜ್ವಾನ ಕಾಳನ್ನು ಕುದಿಸಿ ಕುಡಿಯಲಾಗುತ್ತದೆ. ಇನ್ನೂ ಸೋಂಪು ತುಂಬಾ ಸೌಮ್ಯವಾದ ಆಯ್ಕೆಯಾಗಿದ್ದು, ಊಟದ ನಂತರ ತೃಪ್ತಿ ಮತ್ತು ಹಗುರವಾದ ಅನುಭವವನ್ನು ನೀಡಲು ಜನಪ್ರಿಯವಾಗಿದೆ. ಎರಡರಲ್ಲೂ ಯಾವುದು ಬೆಸ್ಟ್​ ಎಂದು ಹೇಳಲು ಸಾಧ್ಯವಿಲ್ಲ. ಎರಡು ಕಾಳುಗಳು ತಮ್ಮದೇ ರೀತಿಯಲ್ಲಿ ಉತ್ತಮ ಗುಣಗಳನ್ನು ಹೊಂದಿವೆ. ಜೊತೆಗೆ ತಮ್ಮದೇ ಪ್ರತ್ಯೇಕವಾದ ರೀತಿಯಲ್ಲಿ ಹೊಟ್ಟೆ ಸಮಸ್ಯೆಗೆ ಸಹಾಯ ಮಾಡುತ್ತದೆ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net