ಮೂತ್ರಪಿಂಡದ ರೋಗವನ್ನು ತಡೆಗಟ್ಟಲು ಈ 5 ದೈನಂದಿನ ಅಭ್ಯಾಸಗಳನ್ನು ಅನುಸರಿಸಿ ಸಾಕು; health tips

drinking water
Published on

Health tips; ದಿನೇ ದಿನೇ ಹಲವು ಆರೋಗ್ಯ ಸಮಸ್ಯೆಗಳು ಸಾಮಾನ್ಯ ಜನರ ದೇಹದ ಒಳಗೆ ಬಂದು ಸೇರುತ್ತಿವೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಂತೆ ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ನಮ್ಮ ದೇಹದಲ್ಲಿನ ಮೂತ್ರಪಿಂಡದ ಆರೋಗ್ಯವನ್ನು ಕಾಪಾಪಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಭಾರತದಲ್ಲಿ ಮೂತ್ರಪಿಂಡದ ಕಾಯಿಲೆಗಳು ಸಾಮಾನ್ಯವಾಗಿದ್ದು, ಯುವಕರು ಮತ್ತು ವೃದ್ಧರ ಮೇಲೆ ಪರಿಣಾಮ ಬೀರುತ್ತಿವೆ. ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡದ ಕಾಯಿಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ ನೀವು ನಿತ್ಯ ಈ ಅಭ್ಯಾಸಗಳನ್ನು ಅನುಸರಿಸುವುದರಿಂದ ಮೂತ್ರಪಿಂಡದ ಹಾನಿಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಖನಿಜಗಳು ಮೂತ್ರನಾಳವನ್ನು ನಿರ್ಬಂಧಿಸಿದಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ. ಇದು ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಪರಿಣಾಮ ಬೀರುತ್ತದೆ. ಪಾದಗಳು ಅಥವಾ ಮುಖದಲ್ಲಿ ಊತ, ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ, ಆಯಾಸ, ಹಸಿವಿನ ಕೊರತೆ, ವಾಕರಿಕೆ ಮತ್ತು ಮೂತ್ರದಲ್ಲಿ ರಕ್ತ ಬರುವ ಪ್ರಕ್ರಿಯೆ ಮೂತ್ರಪಿಂಡದ ಸಮಸ್ಯೆಗಳ ಲಕ್ಷಣಗಳಾಗಿವೆ. ಚಿಕಿತ್ಸೆ ಪಡೆಯದಿದ್ದರೆ, ಮೂತ್ರಪಿಂಡದ ಕಾಯಿಲೆಯು ಅಧಿಕ ರಕ್ತದೊತ್ತಡ, ರಕ್ತಹೀನತೆ, ಮೂಳೆ ಅಸ್ವಸ್ಥತೆಗಳು, ನರಗಳ ಹಾನಿ ಹಾಗೂ ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರತಿಯೊಬ್ಬ ಭಾರತೀಯರು ತಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಅಳವಡಿಸಿಕೊಳ್ಳಬೇಕಾದ ಸರಳ ಅಭ್ಯಾಸಗಳನ್ನು ಆಹಾರ ತಜ್ಞೆ ಡಾ. ಜಿನಾಲ್ ಪಟೇಲ್ ಅವರು ತಿಳಿಸಿಕೊಟ್ಟಿದ್ದಾರೆ.

ಮೂತ್ರಪಿಂಡ ರಕ್ಷಿಸಲು 5 ಅಭ್ಯಾಸಗಳು:

ಹೆಚ್ಚುವರಿ ಉಪ್ಪು ಮೂತ್ರಪಿಂಡಗಳ ಮೇಲೆ ಒತ್ತಡ ಹೇರಬಹುದು ಮತ್ತು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹಾಗಾಗಿ ಸಂಸ್ಕರಿಸಿದ ಮತ್ತು ಖಾರದ ಆಹಾರಗಳನ್ನು ತಪ್ಪಿಸುವುದು ಅವಶ್ಯಕ. ಆದ್ದರಿಂದ, ಪಿಜ್ಜಾ, ಪಾಸ್ತಾ, ನಮ್ಕೀನ್‌ಗಳು, ಬೇಕರಿ ವಸ್ತುಗಳು, ಸೋಡಾಗಳು ಮತ್ತು ಕೋಲಾಗಳಿಗೆ ಬ್ರೇಕ್​ ಹಾಕಬೇಕು.

1. ಉಪ್ಪು ಮತ್ತು ಸಂಸ್ಕರಿಸಿದ ಆಹಾರಕ್ಕೆ ಬ್ರೇಕ್:

ಓವರ್-ದಿ-ಕೌಂಟರ್ ಔಷಧಿಗಳನ್ನು ಆಗಾಗ್ಗೆ ಬಳಸುವುದರಿಂದ ನಿಮ್ಮ ಮೂತ್ರಪಿಂಡಗಳಿಗೆ ಹಾನಿಯಾಗಬಹುದು. ಯಾವುದೇ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.

2. ಅನಗತ್ಯ ಔಷಧಿಗಳನ್ನು ತಪ್ಪಿಸಿ:

ವಿವಿಧ ಅಧ್ಯಯನಗಳ ಪ್ರಕಾರ, ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರಪಿಂಡಗಳು ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ 10 ರಿಂದ 12 ಗ್ಲಾಸ್ ನೀರು ಕುಡಿಯುವುದು ಉತ್ತಮ. ತಜ್ಞರನ್ನು ಸಂಪರ್ಕಿಸಿ ಮತ್ತು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ.

3. ಹೈಡ್ರೇಟೆಡ್ ಆಗಿರುವುದು:

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡ ಕಾಯಿಲೆಗೆ ಕಾರಣವಾಗಿವೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ಔಷಧಿಗಳು, ವ್ಯಾಯಾಮ ಮತ್ತು ಪ್ರತಿದಿನ ಕನಿಷ್ಠ 8 ಗಂಟೆಗಳ ನಿದ್ರೆ ಈ ಸಹವರ್ತಿ ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ಇತರ ರೋಗಗಳ ಬಗ್ಗೆ ಜಾಗ್ರತೆ:

(ಏಜೆನ್ಸೀಸ್)

ನಿಯಮಿತ ದೈಹಿಕ ಚಟುವಟಿಕೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಮಧುಮೇಹ ಮತ್ತು ಹೃದ್ರೋಗಗಳನ್ನು ತಡೆಯುತ್ತದೆ ಎಂದು ವಿವಿಧ ಅಧ್ಯಯನಗಳು ದೃಢಪಡಿಸಿವೆ. ಹಾಗಾಗಿ ಕನಿಷ್ಠ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ.

5. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net