ನಾರಾಯಣ ಗುರುಗಳ ಆದರ್ಶ ಅನುಸರಿಸಿ

kota (5)
Published on

ಕೋಟ: ಬ್ರಹ್ಮಶ್ರೀ ನಾರಾಯಣಗುರು ಇಡೀ ವಿಶ್ವಕ್ಕೆ ಸಾಮರಸ್ಯ ಸಾರಿದ ಮಹಾನ್ ವಾನವತವಾದಿಯಾಗಿ ಅಸ್ಪೃಶ್ಯತೆ ವಿರುದ್ಧ ಸಮರ ಸಾರಿ ಮನುಕುಲದ ಒಳಿತಿಗೆ ಶ್ರಮಿಸಿದ್ದಾರೆ ಎಂದು ಕೋಟದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂದ ಅಧ್ಯಕ್ಷ ಜಿ.ಸದಾನಂದ ಗಿಳಿಯಾರು ಹೇಳಿದರು.

ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮ ಶ್ರೀನಾರಾಯಣ ಗುರುಗಳ 171ನೇ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡ ಗುರುಪೂಜಾ ಕಾರ್ಯಕ್ರಮದಲ್ಲಿ ವಾತನಾಡಿದರು.

ಗುರುಪೂಜಾ ಕಾರ್ಯಕ್ರಮವನ್ನು ಹೆಜವಾಡಿ ಮಹೇಶ್ ಶಾಂತಿ ವಾರ್ಗದರ್ಶನದಲ್ಲಿ ಸುರೇಶ್ ಶಾಂತಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು. ಅರ್ಚಕರಾದ ಮನೋಹರ್ ಪೂಜಾರಿ, ಸಂತೋಷ್ ಪೂಜಾರಿ ಸಹಕರಿಸಿದರು.

ಕೋಟದ ಪಡುಕರೆ ರಾವಾಮೃತ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ಸಂದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ, ಸಂದ ಪ್ರಮುಖರಾದ ರಾಜು ಪೂಜಾರಿ ಹೋಬಳಿ ಮನೆ, ರಾಜು ಪೂಜಾರಿ ಪಡುಕರೆ, ಪುಟ್ಟಣ ಪೂಜಾರಿ, ಸುಧಾ ಎ.ಪೂಜಾರಿ, ಗುಲಾಬಿ ಪೂಜಾರಿ, ಕೃಷ್ಣ ಪೂಜಾರಿ ಪಿ, ರಾಜು ಪೂಜಾರಿ ಕದ್ರಿಕಟ್ಟು, ಸುರೇಶ್ ಗಿಳಿಯಾರು, ಸುರೇಶ್ ಗೊಬ್ಬರಬೆಟ್ಟು, ಉಮೇಶ್ ಪೂಜಾರಿ, ರತ್ನಾಕರ ಪೂಜಾರಿ, ಆನಂದ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net