ರೆಮಾಲ್​ ಚಂಡಮಾರುತದ ಎಫೆಕ್ಟ್​ : 4 ಮಂದಿ ಸಾವು, ಜನಜೀವನ ಅಸ್ತವ್ಯಸ್ತ

1 Min Read
ರೆಮಾಲ್​ ಚಂಡಮಾರುತದ ಎಫೆಕ್ಟ್​ : 4 ಮಂದಿ ಸಾವು, ಜನಜೀವನ ಅಸ್ತವ್ಯಸ್ತ

ಇಂಫಾಲ: ರೆಮಾಲ್ ಚಂಡಮಾರುತದಿಂದಾಗಿ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದೆ. ಇದರಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕೃತ ವರದಿ ತಿಳಿಸಿದೆ.

ಇದನ್ನು ಓದಿhttps://www.vijayavani.net/12-5-lakh-tourists-visited-to-jammu-kashmir-on-this-year

ರೆಮಾಲ್ ಚಂಡಮಾರುತದಿಂದ ಇಂಫಾಲ್ ನಗರದ ಮೂಲಕ ಹಾದುಹೋಗುವ ಹೆಚ್ಚಿನ ನದಿಗಳಲ್ಲಿ ನೀರಿನ ಮಟ್ಟವು ವೇಗವಾಗಿ ಹೆಚ್ಚುತ್ತಿದ್ದು ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ರಾಜ್ಯದ 255 ಗ್ರಾಮಗಳಲ್ಲಿ ಒಟ್ಟು 1,26,950 ಜನರು ತೊಂದರೆ ಅನುಭವಿಸುತ್ತಿದ್ದಾರೆ. 16,364 ಮನೆಗಳಿಗೆ ಹಾನಿಯಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ 20,504 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಬಿಡುಗಡೆಗೊಳಿಸಿದ ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ.

522 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಗುಡ್ಡಗಾಡು ಜಿಲ್ಲೆಗಳ ಹಲವು ಭಾಗಗಳಲ್ಲಿ ಕಳೆದ ಮೂರು ದಿನಗಳಲ್ಲಿ 292 ಭೂಕುಸಿತಗಳು ಸಂಭವಿಸಿವೆ. ಸಂತ್ರಸ್ತರಿಗಾಗಿ 51 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು(ಎನ್‌ಡಿಆರ್‌ಎಫ್) ನಿಯೋಜಿಸಲಾಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ವಾಯುಪಡೆ, ನೌಕಾಪಡೆ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ವರದಿ ತಿಳಿಸಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜನೆಗೊಂಡಿರುವ ಅಸ್ಸಾಂ ರೈಫಲ್ಸ್, ಇದುವರೆಗೆ 969 ಪುರುಷರು, 992 ಮಹಿಳೆಯರು ಮತ್ತು 601 ಮಕ್ಕಳು ಸೇರಿದಂತೆ ಒಟ್ಟು 2,561 ಜನರನ್ನು ರಕ್ಷಿಸಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​)

ಬಾಲಯ್ಯನನ್ನು ಸಮರ್ಥಿಸಿಕೊಂಡ ನಟಿ ಅಂಜಲಿ : ಏನಂದ್ರು ನೆಟ್ಟಿಗರು?

See also  ಎಚ್ಚರಿಕೆಗೂ ಕ್ಯಾರೆ ಎನ್ನದೆ ಮುಂದೆ ಸಾಗಿದ ಚಾಲಕ: ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಗೂಡ್ಸ್​ ವಾಹನ
Share This Article