ಗುಂಡಬಾಳ ನದಿಯಿಂದ ಪ್ರವಾಹ

ಹೊನ್ನಾವರ :ಮಳೆಯ ಆರ್ಭಟ ಗುರುವಾರ ಮುಂದುವರೆದಿದ್ದು ತಾಲೂಕಿನ ನದಿತೀರದ ಹಾಗೂ ತಗ್ಗು ಪ್ರದೇಶಗಳು ಜಲಾವ್ರತವಾಗಿವೆ. ಗುಂಡಬಾಳ ನದಿ ಮತ್ತು ಭಾಸ್ಕೇರಿ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.
ಗುಂಡಬಾಳ ನದಿ ತೀರದ ಊರುಗಳಾದ ಗುಂಡಬಾಳ, ಹೆಬೈಲ್, ಗುಂಡಿಬೈಲ, ಚಿಕ್ಕನಕೋಡ, ಹಾಡಗೇರಿ, ಹುಡಗೋಡ, ಹಡಿನಬಾಳ, ಕಡಗೇರಿ, ನಾಥಗೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳ ಜನರು ಕಾಳಜಿಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸ್ಥಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೇರುಸೊಪ್ಪ ಜಲಾಶಯದಿಂದ ನೀರು ಬಿಡುವ ಹಿನ್ನೆಲೆಯಲ್ಲಿ ಶರಾವತಿ ನದಿ ತೀರದ ಸರಳಗಿ ಮತ್ತು ಅಳ್ಳಂಕಿಯಲ್ಲಿ ಕಾಳಜಿಕೇಂದ್ರಗಳನ್ನು ತೆರೆಯಲಾಗಿದೆ.

ಕಾಳಜಿಕೇಂದ್ರಗಳು: ಹೊನ್ನಾವರ ತಾಲೂಕಿನಲ್ಲಿ ಗುಂಡಬಾಳ ನದಿ ಹಾಗೂ ಶರಾವತಿ ನದಿ ತೀರದ ಒಂಭತ್ತು ಕಡೆಗಳಲ್ಲಿ ಕಾಳಜಿಕೇಂದ್ರಗಳನ್ನು ತೆರೆಯಲಾಗಿದ್ದು 341 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ.
ಗುಂಡಬಾಳ ನಂ.2 ಶಾಲೆಯಲ್ಲಿ 13 ಜನರು, ಹೆಬೈಲ್ ಅಂಗನವಾಡಿ ಕೇಂದ್ರದಲ್ಲಿ 7 ಜನರು, ಗುಂಡಿಬೈಲ್ ನಂ.1 ಶಾಲೆಯಲ್ಲಿ 37 ಜನರು, ಗುಂಡಿಬೈಲ್ ನಂ. 2 ಶಾಲೆಯಲ್ಲಿ 49 ಜನರು, ಹಡಿನಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ 113 ಜನರು, ನಾಥಗೇರಿ ಶಾಲೆಯಲ್ಲಿ 15 ಜನರು, ಕಡಗೇರಿಯಲ್ಲಿ 14 ಜನರು ಆಶ್ರಯ ಪಡೆದಿದ್ದಾರೆ. ಗೇರುಸೊಪ್ಪಾ ಜಲಾಶಯದಿಂದ ನೀರು ಬೀಡುವ ಮುನ್ನೆಚ್ಚರಿಕಾ ಕ್ರಮವಾಗಿ ಸರಳಗಿ ಶಾಲೆಯಲ್ಲಿ 68 ಜನರು, ಅಳ್ಳಂಕಿ ಪ್ರೌಢಶಾಲೆಯಲ್ಲಿ 25 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

https://www.vijayavani.net/a-rural-road-washed-away-by-rain
Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…