Flight Accident : ಕಳೆದ ಕೆಲವು ದಿನಗಳಿಂದ ಸಂಭವಿಸಿದ ಸರಣಿ ವಿಮಾನ ಅಪಘಾತಗಳು ಪ್ರಯಾಣಿಕರನ್ನು ಚಿಂತಿಸುವಂತೆ ಮಾಡಿದೆ. ನೂರಾರು ಮಂದಿ ಮೃತಪಟ್ಟಿದ್ದು, ವಿಮಾನ ಅಪಘಾತದ ದೃಶ್ಯಗಳನ್ನು ನೋಡುಗರ ಮನಕಲಕುವಂತಿದೆ. ಇತ್ತೀಚೆಗೆ ಮತ್ತೊಂದು ವಿಮಾನ ಅಪಘಾತ ಸ್ವಲ್ಪದರಲ್ಲೇ ತಪ್ಪಿದೆ. ಅಮೆರಿಕದ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ವಿಮಾನವೊಂದು ರನ್‌ವೇಯಲ್ಲಿರುವಾಗ ಅದೇ ಸಮಯದಲ್ಲಿ ಮತ್ತೊಂದು ವಿಮಾನ ಟೇಕಾಫ್ ಆಗುತ್ತಿತ್ತು. ಈ ವೇಳೆ ರನ್ವೇನಲ್ಲಿದ್ದ ವಿಮಾನವನ್ನು ಗಮನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್, ಗಾಬರಿಗೊಂಡು ಪೈಲಟ್‌ಗೆ ‘ನಿಲ್ಲಿಸಿ, ನಿಲ್ಲಿಸಿ, ನಿಲ್ಲಿಸಿ’ ಎಂದು ಎಚ್ಚರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಾಷಿಂಗ್ಟನ್ ರಾಜ್ಯದಿಂದ ಗೊನ್ಜಾಗಾ ವಿಶ್ವವಿದ್ಯಾಲಯದ ಪುರುಷರ ಬಾಸ್ಕೆಟ್‌ಬಾಲ್ ತಂಡವನ್ನು ಹೊತ್ತ ಖಾಸಗಿ ಜೆಟ್ ರನ್‌ವೇಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಆದರೆ, ಕ್ಷಣಾರ್ಧದಲ್ಲಿ ಅನಾಹುತ ತಪ್ಪಿದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶುಕ್ರವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ಮಾಡುತ್ತದೆ.
NEW: The FAA has launched an investigation after the men’s Gonzaga basketball team nearly got eliminated by a Delta plane taking off.
“Stop! Stop! Stop!” the air traffic controller could be heard saying.
The chartered Embraer E135 jet, carrying the team, had just landed at… pic.twitter.com/6UAUOG5wiP
— Collin Rugg (@CollinRugg) December 30, 2024
ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವು ರನ್‌ವೇಯಿಂದ ಟೇಕ್ ಆಫ್ ಆಗುತ್ತಿದ್ದಂತೆ ಬಾಸ್ಕೆಟ್‌ಬಾಲ್ ತಂಡದ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ‘ಕೀ ಲೈಮ್ ಏರ್ ಫ್ಲೈಟ್ 563’ ರನ್‌ವೇ ಅನ್ನು ದಾಟದಂತೆ ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ಆದೇಶಿಸಿದರು. ಅದೇ ಸಮಯದಲ್ಲಿ ಎಂಬ್ರೇರ್ ಇ 135 ವಿಮಾನವು ಟೇಕ್ ಆಫ್ ಆಯಿತು. ಎರಡೂ ವಿಮಾನ ಒಟ್ಟಿಗೆ ಟೇಕಾಫ್ ಆಗಿದ್ದರೆ ಭಾರಿ ದುರಂತವೊಂದು ಸಂಭವಿಸುತ್ತಿತ್ತು. (ಏಜೆನ್ಸೀಸ್)
ಅದೃಷ್ಟವಶಾತ್ ದಕ್ಷಿಣ ಕೊರಿಯಾದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ವಿಮಾನ ಪತನ! Flight Crash
ನೀವು ರಾತ್ರಿ ವೇಳೆ ಮೊಟ್ಟೆ ತಿನ್ನುತ್ತೀರಾ? ಆರೋಗ್ಯ ತಜ್ಞರು ಹೇಳೋದೇನು? ಇಲ್ಲಿದೆ ಉಪಯುಕ್ತ ಮಾಹಿತಿ… Eggs