90 ಅಮೃತ ಸರೋವರಗಳಲ್ಲಿ ಹಾರಲಿದೆ ತಿರಂಗಾ

Amruta Sarovara
Published on

ಕಾರವಾರ: ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಅನುದಾನಗಳಲ್ಲಿ ನಿರ್ಮಾಣವಾದ ಜಿಲ್ಲೆಯ 90 ರಷ್ಟು ಅಮೃತ ಸರೋವರಗಳಲ್ಲಿ ಈ ಆಗಸ್ಟ್ 15 ರಂದು ಸಂಭ್ರಮ ಮನೆ ಮಾಡಲಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು `ನನ್ನ ಮಣ್ಣು ನನ್ನ ದೇಶ' ಎಂಬ ಅಭಿಯಾನವನ್ನು ನಡೆಸಲು ಆದೇಶಿಸಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಸೂಚಿಸಲಾಗಿದೆ.

ಅಂದು ಎಲ್ಲೆಡೆ ಧ್ವಜಾರೋಹಣ ಮಾಡುವ ಜತೆಗೆ ಗ್ರಾಮೀಣ ಆಟಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಂಕೋಲಾದ ತೆರೆದ ಬಾವಿಗಳಲ್ಲಿ ನೈಟ್ರೇಟ್ ಅಂಶ
ಜಿಲ್ಲೆಯಲ್ಲೂ ಈ ಸಂಬಂಧ ಗ್ರಾಪಂಗಳ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಗೋರಿ, ಹಗ್ಗ ಜಗ್ಗಾಟ, ಖೋ-ಖೋ, ಹಗ್ಗ ಜಿಗಿತ(ರೋಪ್ ಜಂಪಿಂಗ್), ಕುಂಟ ಓಟ, ಕುರ್ಚಿ ಓಟ ಸೇರಿದಂತೆ ಇತರೆ ಕ್ರೀಡಾ ಚಟುವಟಿಕೆಗಳು ಇರಲಿವೆ.

ಜೊತೆಗೆ ಅಮೃತ ಸರೋವರ ತಾಣಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಮಕ್ಕಳಿಗೆ ಪ್ರಬಂಧ, ಭಾಷಣ, ಚರ್ಚಾಕೂಟ, ರಂಗೋಲಿ, ಚಿತ್ರಕಲೆಯಂತಹ ಇತರೆ ಸ್ಪರ್ಧಾ ಚಟುವಟಿಕೆಗಳನ್ನೂ ಸಹ ಆಯೋಜಿಸಲಾಗುತ್ತಿದೆ
ಶಿಲಾಫಲಕ ನಿರ್ಮಾಣ
ಎಲ್ಲ ಅಮೃತ ಸರೋವರಗಳ ಸ್ಥಳಗಳಲ್ಲಿ ಶಿಲಾಫಲಕ ನಿರ್ಮಿಸಲಾಗುತ್ತಿದ್ದು, ಸ್ವಾತಂತ್ರ‍್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ, ರಾಜ್ಯ ಸಶಸ್ತ್ರ ಪೊಲೀಸ್ ಪಡೆಗಳ ಅಽಕಾರಿಗಳು, ಸಿಬ್ಬಂದಿ, ಕರ್ತವ್ಯದ ಸಾಲಿನಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾಫಲಕದಲ್ಲಿ ಬರೆಸಲಾಗುತ್ತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದುವೇಳೆ ವೀರರು ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಸಮರ್ಪಣೆ ಶಿಲಾಫಲಕ ನಿರ್ಮಿಸುವ ಮೂಲಕ ವೀರರಿಗೆ ಗೌರವ ಸಮರ್ಪಿಸಲಾಗುತ್ತಿದೆ.
ಜಲ ಸಂರಕ್ಷಣೆ ಜಾಗೃತಿ`
ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಿದ ಧ್ವಜಾರೋಹಣದ ಅಂಗವಾಗಿ ಚುನಾಯಿತ ವಿಶೇಷ ಪ್ರತಿನಿಽಗಳು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಕೆರೆ ನೀರು ಬಳಕೆದಾರರ ಸಂಘದ ಸದಸ್ಯರು ಹಾಗೂ ಶಾಲಾ-ಕಾಲೇಜುಗಳ ಮಕ್ಕಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಂಡು ಜಲ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತ ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ.

ಅಂದು ಬೆಳಗ್ಗೆ ನಡೆಯುವ ತಿರಂಗಾ ಯಾತ್ರೆ ಇಡೀ ಗ್ರಾಮದಲ್ಲಿ ಸಂಚರಿಸಿ ಅಮೃತ ಸರೋವರ ಸ್ಥಳ ತಲುಪಿ ಮುಕ್ತಾಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net