ಕುವೈತ್‌ನ ಅಗ್ನಿ ದುರಂತದಲ್ಲಿ ತಮಿಳುನಾಡಿನ ಐವರು ಸಾವು! 

1 Min Read
kuwait

ನವದೆಹಲಿ: ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 49 ಮಂದಿ ಸಜೀವ ದಹನವಾಗಿದ್ದು, ಮೃತರಲ್ಲಿ ತಮಿಳುನಾಡಿಗೆ ಸೇರಿದ್ದಾರೆ ಎಂದು ತಮಿಳುನಾಡು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗಿ ಕೆಎಸ್ ಮಸ್ತಾನ್ ಗುರುವಾರ ಇಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನೀಟ್‌ ಯುಜಿ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆಗೆ ಪುರಾವೆ ಇಲ್ಲ ಎಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ

ಮೃತರು ರಾಜ್ಯದ ತಂಜಾವೂರು, ರಾಮನಾಥಪುರಂ ಮತ್ತು ಪೆರವೂರಣಿ ಪ್ರದೇಶಗಳಿಗೆ ಸೇರಿದವರಾಗಿದ್ದು, ಅವರನ್ನು ರಾಮ ಕರುಪ್ಪನ್, ವೀರಸಾಮಿ ಮರಿಯಪ್ಪನ್, ಚಿನ್ನದುರೈ ಕೃಷ್ಣಮೂರ್ತಿ, ಮೊಹಮ್ಮದ್ ಶೆರಿಫ್ ಮತ್ತು ರಿಚರ್ಡ್ ಎಂದು ಗುರುತಿಸಲಾಗಿದೆ. ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 49 ಜನ ಸಾವನ್ನಪ್ಪಿದ್ದು, ಇವರಲ್ಲಿ ಬಹುತೇಕರು ಭಾರತೀಯರಾಗಿದ್ದಾರೆ. 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ನಿರ್ದೇಶನದಂತೆ, ಮೃತದೇಹಗಳನ್ನು ಭಾರತಕ್ಕೆ ತರಲು ಮತ್ತು ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಲು ಅಗತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. “ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿಯನ್ನು ನೀಡಲಾಗುವುದು ಎಂದು ರಾಯಭಾರ ಕಚೇರಿ (ಕುವೈತ್‌ನಲ್ಲಿ) ಹೇಳಿದೆ.

ಬುಧವಾರ ಮುಂಜಾನೆ ಕುವೈತ್‌ನ ಮಂಗಾಫ್ ನಗರದ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 40 ಭಾರತೀಯರು ಸೇರಿದಂತೆ 49 ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ.

ಸೇನಾ ಔಟ್‌ಪೋಸ್ಟ್ ಮೇಲೆ ದಾಳಿ: ಕೆಲವೇ ಗಂಟೆಗಳಲ್ಲಿ ಜಮ್ಮುವಿನ ದೋಡಾದಲ್ಲಿ ಎನ್‌ಕೌಂಟರ್ ಆರಂಭ

See also  ಮದ್ವೆ ಮಂಟಪಕ್ಕೆ ನುಗ್ಗಿ ವರನ ಕೈಯಿಂದ ತಾಳಿ ಕಿತ್ತುಕೊಂಡು ಪ್ರೇಯಸಿಗೆ ಕಟ್ಟಲು ಯತ್ನ: ಮುಂದೆ ನಡೆದದ್ದಿಷ್ಟು...
Share This Article