More

  3 ವರ್ಷ ಆಡುವಷ್ಟು ಫಿಟ್​ ಆಗಿದ್ದೀನಿ ಆದ್ರೆ…; ನಿವೃತ್ತಿಯ ಹಿಂದಿನ ಕಾರಣವನ್ನು ತಿಳಿಸಿದ ದಿನೇಶ್​ ಕಾರ್ತಿಕ್

  ನವದೆಹಲಿ: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಮುಕ್ತಾಯಗೊಂಡಿದ್ದು, ಎಲ್ಲರ ಚಿತ್ತ ಈಗ ಟಿ-20 ವಿಶ್ವಕಪ್​ ಮೇಲೆ ನೆಟ್ಟಿದೆ. ಇನ್ನೂ ಈ ಬಾರಿಯ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತೋರಿದ ಪ್ರದರ್ಶನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದು, ಛಲ ಒಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ನೀಡಿತ್ತು. ಇನ್ನೂ ಆರ್​ಸಿಬಿ ಪರ ಸ್ಫೋಟಕ ಆಟವಾಡುವ ಮೂಲಕ ಬೆಸ್ಟ್​ ಫಿನಿಶರ್​ ಎಂಬ ಖ್ಯಾತಿಯನ್ನು ಪಡೆದಿದ್ದರು.

  ಇತ್ತೀಚಿಗೆ ಐಪಿಎಲ್​ಗೆ ನಿವೃತ್ತಿ ಘೋಷಿಸಿದ ದಿನೇಶ್​​ ಕಾರ್ತಿಕ್​ಗೆ ಆರ್​ಸಿಬಿ ಮ್ಯಾನೇಜ್​ಮೆಂಟ್ ಹಾಗೂ ಅಭಿಮಾನಿಗಳು ಭಾವಪೂರ್ಣ ಬೀಳ್ಕೊಡುಗೆಯನ್ನು ಕೊಟ್ಟಿದ್ದರು. ಇನ್ನೂ 39ನೇ ವಸಂತಕ್ಕೆ ಕಾಲಿಟ್ಟಿರುವ ದಿನೇಶ್​ ಕಾರ್ತಿಕ್​ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

  Dinesh Karthik

  ಇದನ್ನೂ ಓದಿ: ನರೇಂದ್ರ ಮೋದಿ ಸೋಲಲಿ; ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಶುಭ ಹಾರೈಸಿದ ಪಾಕ್​ ಮಾಜಿ ಸಚಿವ

  ನಾನು ಇನ್ನೂ ಮೂರು ವರ್ಷಗಳ ಕಾಲ ಆಡಲು ದೈಹಿಕವಾಗಿ ಸಮರ್ಥನಾಗಿದ್ದೇನೆ. ಇಂಪ್ಯಾಕ್ಟ್​ ಪ್ಲೇಯರ್​ ನಿಯಮದಿಂದಾಗಿ ಇದು ತುಂಬಾ ಸುಲಭವಾಗುತ್ತದೆ. ಆದ್ದರಿಂದ ಕ್ರಿಕೆಟ್​ ಆಡುವ ವಿಚಾರವಾಗಿ ನಾನು ಇನ್ನೂ ಮೂರು ವರ್ಷಗಳ ಕಾಲ ಆಡಲು ಫಿಟ್​ ಆಗಿದ್ದೇನೆ. ಏಕೆಂದರೆ ನಾನು ನನ್ನ ಕ್ರಿಕೆಟ್​ ಜೀವನದಲ್ಲಿ ಫಿಟ್ನೆಸ್​ ಹಾಗೂ ಫಾರ್ಮ್​ ಬಗ್ಗೆ ಎಂದಿಗೂ ಯೋಚಿಸಿಲ್ಲ.

  ನಾನು ಏನು ಮಾಡಬೇಕೆಂದು ನೋಡುತ್ತೇನೋ ಅದರಲ್ಲಿ ನಂಬಿಕೆ ಇಡುತ್ತೇನೆ. ನಾನು ಅದಕ್ಕೆ 100% ಬದ್ಧತೆಯನ್ನು ನೀಡಲು ಪ್ರಯತ್ನಿಸುತ್ತೇನೆ ಮತ್ತು ಅದರಲ್ಲಿ ಅತ್ಯುತ್ತಮವಾಗಲು ನಾನು ಏನನ್ನು ಮಾಡಬಲ್ಲೆನೋ ಅದನ್ನು ಮಾಡುತ್ತೇನೆ. ನಾನು ಹೆಚ್ಚು ಪಂದ್ಯಗಳನ್ನು ಆಡಬೇಕೆಂದು ಬಯಸಿದೆ. ಸ್ವಲ್ಪ ಎಡವಿದರೂ ಆಗುವುದಿಲ್ಲ ಎಂದು ತಿಳಿಯಿತು. ಹೊರಗಿನವರಿಗೆ ತಿಳಿದಿಲ್ಲದಿದ್ದರೂ ನನ್ನ ಒಳಗಡೆ ಏನಾಗುತ್ತಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು. ಅದೆಲ್ಲವನ್ನೂ ಗಣನೆಗೆ ತೆಗೆದುಕೊಂಡು, ಇದು ನಿವೃತ್ತಿಯ ಸಮಯ ಎಂದು ನಾನು ಭಾವಿಸಿದೆನು. ಮುಖ್ಯವಾಗಿ, ನಾನು ಏನು ಮಾಡಿದರೂ ಭಾರತಕ್ಕಾಗಿ ಆಡಲು ಸಾಧ್ಯವಿಲ್ಲ ಎಂಬ ಅಂಶವು ತುಂಬಾ ಸ್ಪಷ್ಟವಾಗಿತ್ತು. ಹೀಗಾಗಿ ನಿವೃತ್ತಿ ಘೋಷಿಸಬೇಕಾಯಿತು ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

  See also  ಕಾರ್ತಿಕ್​​, ಸಂಗೀತಾ, ತನಿಷಾ ಫೇಕ್​​ ಫ್ರೆಂಡ್​ಶಿಪ್​ ಎಂಡ್​ ಆಗಿದೆ: ಮೈಕಲ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts