

ಮುಂಬೈ: ಪೂಜಾ ಹೆಗ್ಡೆ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದವರು, ಬಂಧು-ಮಿತ್ರರು ಈ ಸಂದರ್ಭದಲ್ಲಿ ಪೂಜಾಗೆ ಹಲವು ಗಿಫ್ಟ್ಗಳನ್ನು ಕೊಟ್ಟಿರಬಹುದು. ಆದರೆ, 'ರಾಧೆ ಶ್ಯಾಮ್' ಚಿತ್ರತಂಡದವರು ಪೂಜಾಗೆ ಒಂದು ಪೋಸ್ಟರ್ ಗಿಫ್ಟ್ ಕೊಟ್ಟಿದ್ದಾರೆ.
'ರಾಧೆ ಶ್ಯಾಮ್', ಪೂಜಾ ಅಭಿನಯದ ಹೊಸ ಚಿತ್ರ. ಈ ಚಿತ್ರದಲ್ಲಿ ಅವರು ಪ್ರಭಾಸ್ಗೆ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ರೆಟ್ರೋ ಚಿತ್ರವಾಗಿದ್ದು, 70-80ರ ದಶಕದಲ್ಲಿ ನಡೆಯುವ ಕಥೆ ಈ ಚಿತ್ರದ್ದಾಗಿದೆ ಎಂದು ಹೇಳಲಾಗುತ್ತಿದೆ.
ಪೂಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಪೂಜಾ ರೈಲಿನಲ್ಲಿ ಕುಳಿತುಕೊಂಡಿರುವ ದೃಶ್ಯವನ್ನು ನೋಡಬಹುದಾಗಿದೆ. ಈ ಪೋಸ್ಟರ್ನಲ್ಲಿ ಪೂಜಾ ಅವರದ್ದು ರೆಟ್ರೋ ಲುಕ್ ಆಗಿದ್ದು, ಅವರ ಸ್ಕಾರ್ಫ್ ಮತ್ತು ಡ್ರೆಸ್ ಗಮನಸೆಳೆಯುತ್ತಿದೆ. ಇನ್ನು ಚಿತ್ರದಲ್ಲಿ ಅವರ ಹೆಸರು ಪ್ರೇರಣಾ ಎಂದಾಗಿದ್ದು, ಹ್ಯಾಪಿ ಬರ್ಥ್ಡೇ ಪ್ರೇರಣಾ ಎಂದು ಚಿತ್ರತಂಡದವರು ಪೂಜಾಗೆ ಶುಭ ಹಾರೈಸಿದ್ದಾರೆ.
'ರಾಧೆ ಶ್ಯಾಮ್' ಚಿತ್ರವನ್ನು ರಾಧಾಕೃಷ್ಣ ಅವರು ನಿರ್ದೇಶಿಸಿದ್ದು, ಯುವಿ ಕ್ರಿಯೇಷನ್ಸ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.