

‘ಆರ್ಆರ್ಆರ್’ ಚಿತ್ರದಲ್ಲಿ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಹೇಗೆ ಕಾಣುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಈಗಾಗಲೇ ಅವರಿಬ್ಬರ ಫಸ್ಟ್ಲುಕ್ ಬಿಡುಗಡೆ ಮಾಡಲಾಗಿತ್ತು. ಆದರೆ, ನಾಯಕಿ ಆಲಿಯಾ ಭಟ್ ಹೇಗೆ ಕಾಣುತ್ತಾರೆ ಎಂದು ಚಿತ್ರತಂಡ ಸಸ್ಪೆನ್ಸ್ ಕಾಯ್ದುಕೊಂಡೇ ಬಂದಿತ್ತು. ಸೋಮವಾರ ಆ ರಹಸ್ಯವನ್ನು ಬಯಲು ಮಾಡಿರುವ ನಿರ್ದೇಶಕ ರಾಜಮೌಳಿ, ಆಲಿಯಾ ಭಟ್ ಜನ್ಮದಿನದ ಪ್ರಯುಕ್ತ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
‘ಆರ್ಆರ್ಆರ್’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಆಗಮಿಸಿರುವ ಆಲಿಯಾ, ಈ ಚಿತ್ರದಲ್ಲಿ ಸೀತೆಯಾಗಿದ್ದಾರೆ. ಬಿಡುಗಡೆ ಆಗಿರುವ ಲುಕ್ನಲ್ಲಿ ನಾಜೂಕು ಸ್ವಭಾವದ ಹುಡುಗಿಯಾಗಿ, ಸಭ್ಯ ಸಂಪ್ರದಾಯಸ್ಥ ಕುಟುಂಬದ ಮಗಳಾಗಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, 1920ರ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯ ಬಗ್ಗೆ ಈಗಾಗಲೇ ನಿರ್ದೇಶಕ ರಾಜಮೌಳಿ ಎರಡು ಕಿರು ಟೀಸರ್ಗಳಲ್ಲಿ ತೋರಿಸಿದ್ದಾರೆ. ಪೂರ್ತಿ ಸಿನಿಮಾ ನೋಡಬೇಕೆಂದರೆ ಅಕ್ಟೋಬರ್ 13ರವರೆಗೂ ಕಾಯಲೇಬೇಕು. ಸದ್ಯ ಕೊನೆಯ ಹಂತದ ಶೂಟಿಂಗ್ನಲ್ಲಿ ನಿರ್ದೇಶಕ ರಾಜಮೌಳಿ ನಿರತರಾಗಿದ್ದು, ಇನ್ನೇನು ಕೆಲವು ದಿನಗಳಲ್ಲೇ ಚಿತ್ರೀಕರಣ ಮುಗಿಸಲಿದ್ದಾರೆ. ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. -ಏಜೆನ್ಸೀಸ್