ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಎಂಬುವರ ಮನೆಯ ಹಿಂಬದಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ, ಬಳಿಕ ಬೆಂಕಿ ಮನೆಗೆ ಆವರಿಸಿ ಮನೆಗೆ ಹಾನಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಮನೆಯಲ್ಲಿ 4 ಜನರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದಕ್ಕೆ ಭೇಟಿ ನೀಡಿದ್ದರು. ಬೆಂಕಿಯು ಮನೆಯ ಹಿಂಬದಿಯ ನೆಟ್ ಒಂದಕ್ಕೆ ತಗುಲಿ ನಂತರ ಮನೆಯಲ್ಲಿದ್ದ ಪುಸ್ತಕ, ರಬ್ಬರ್‌ಗೆ ಹೊತ್ತಿ ಉರಿದಿದೆ. ಸ್ಥಳೀಯಯರಾದ ಆನಂದ್, ಆಶೋಕ್, ಸತೀಶ್, ಧರ್ಣಪ್ಪ ಗೌಡ, ಯಶೋದಾ, ಗೀತಾ, ರಮಾನಂದಶ ಮತ್ತಿತರರು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಬೆಂಕಿಯು ಮನೆಯ ಸುತ್ತಲೂ ಆವರಿಸಿದ ಕಾರಣ ಮನೆಗೆ ಸಂಪೂರ್ಣ ಹಾನಿಯಾಗಿದೆ.