ಮತಾಂತರ ಪ್ರತಿಭಟನೆ: ವಕೀಲ, ಹಿಂದೂ ಮುಖಂಡರ ವಿರುದ್ಧ ಎಫ್​ಐಆರ್​

fir
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತಾಂತರ ವಿರೋಧಿಸಿ ಪೊಲೀಸ್​ ಠಾಣೆ ಎದುರಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್​ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ವಕೀಲರೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೊತೆಯಲ್ಲೇ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸುಮಾರು 100 ಜನರ ವಿರುದ್ಧ ಶಾಂತಿಭಂಗ, ಧರ್ಮನಿಂದನೆ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪಗಳಡಿ ದೂರು ದಾಖಲಿಸಲಾಗಿದೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ವಕೀಲ ಹಾಗೂ ಹಿಂದೂಪರ ಸಂಘಟನೆಯ ಮುಖಂಡ ಅಶೋಕ ಅಣ್ವೇಕರ ಎಂಬುವರು ಹುಬ್ಬಳ್ಳಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್ ಅವರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದರು ಎನ್ನಲಾಗಿದೆ. ಇವರ ವಿರುದ್ಧ ಹಾಗೂ ಠಾಣೆ ಎದುರಲ್ಲಿ ಮತಾಂತರ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಬಜರಂಗದಳ ಮತ್ತು ಇತರ ಹಿಂದೂಪರ ಸಂಘಟನೆಗಳ 100 ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 504, 143, 147, 153, 295A, 298, 353 ರಡಿ ಹುಬ್ಬಳ್ಳಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net