ಐಸ್​ಕ್ರೀಮ್​ನಲ್ಲಿ ಬೆರಳು..ಯಾರದ್ದು ಗೊತ್ತಾ? ಪೊಲೀಸರ ಸ್ಪಷ್ಟನೆ!

ನವದೆಹಲಿ: ಮುಂಬೈ ಮೂಲದ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ತರಿಸಿಕೊಂಡಿದ್ದ ಐಸ್‌ಕ್ರೀಂನಲ್ಲಿ ಬೆರಳು ಪತ್ತೆಯಾದ ಪ್ರಶ್ನೆಗೆ ಬಹುತೇಕ ಸ್ಪಷ್ಟತೆ ಸಿಕ್ಕಿದೆ. ಪುಣೆಯ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಬೆರಳು ಇರಬಹುದು ಎಂದು ಪೊಲೀಸರು ನಂಬಿದ್ದಾರೆ.

ಇದನ್ನೂ ಓದಿ: ಕುಸಿದ ಸೇತುವೆ.. ‘ನಮಗೇನು ಸಂಬಂಧ’ ಎಂದಿದ್ದೇಕೆ ಗಡ್ಕರಿ?

ಐಸ್​ಕ್ರೀ ಕಾರ್ಖಾನೆ ಉದ್ಯೋಗಿ ಇತ್ತೀಚೆಗೆ ತನ್ನ ಬೆರಳಿಗೆ ಗಾಯ ಮಾಡಿಕೊಂಡಿದ್ದ. ಐಸ್ ಕ್ರೀಂನಲ್ಲಿ ಪತ್ತೆಯಾದ ಬೆರಳು ಆತನದ್ದೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಯ ಡಿಎನ್‌ಎ ಮಾದರಿಯನ್ನು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಪ್ರಕಾರ ಯಾರ ಬೆರಳು ಎಂಬ ಪ್ರಶ್ನೆಗೆ ಸ್ಪಷ್ಟತೆ ಸಿಗಲಿದೆ ಎಂದು ಅವರು ವಿವರಿಸಿದ್ದಾರೆ.

ಮಲಾಡ್‌ನ ಡಾ. ಬ್ರೆಂಡನ್ ಫೆರಾರೊ ಅವರು ಇತ್ತೀಚೆಗೆ ಮೂರು ಕೋನ್‌ಗಳ ಐಸ್‌ಕ್ರೀಂ ಅನ್ನು ಆರ್ಡರ್ ಮಾಡಿದ್ದಾರೆ. ಐಸ್ ಕ್ರೀಮ್ ತಿನ್ನುವಾಗ ಒಂದು ಬೆರಳು ಮತ್ತು ಉಗುರು ಕಾಣಿಸಿಕೊಂಡಿದೆ. ಇದು ವೈದ್ಯರು ಆಘಾತಕ್ಕೆ ಒಳಗಾಗುವಂತೆ ಮಾಡಿತ್ತು. ವೈದ್ಯರು ಇದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಅಷ್ಟೇ ಅಲ್ಲದೆ, ಐಸ್​ಕ್ರೈಂ ಸರಬರಾಜು ಮಾಡಿದ ಕಂಪನಿ ವಿರುದ್ಧವೂ ದೂರು ನೀಡಿದ್ದರು. ಇದಕ್ಕೆ ಐಸ್ ಕ್ರೀಮ್ ಕಂಪನಿ ಪ್ರತಿಕ್ರಿಯಿಸಿದೆ. ಉತ್ಪಾದನೆಯನ್ನು ಮೂರನೇ ವ್ಯಕ್ತಿಯಿಂದ ಮಾಡಲಾಗಿದೆ. ಈಗ ಅದರ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ಅದು ಘೋಷಿಸಿದೆ.

ಪರವಾನಗಿ ರದ್ದು?: ಐಸ್​ಕ್ರೀಂನಲ್ಲಿ ಬೆರಳು ಪತ್ತೆಯಾಗಿದ್ದನ್ನು ತಿಳಿದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಾರ್ಖಾನೆಯಲ್ಲಿ ತಪಾಸಣೆ ನಡೆಸಿದೆ. ಕಂಪನಿಯ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಪುಣೆಯ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸಗಾರನೊಬ್ಬನ ಕೈಗೆ ಗಾಯವಾಗಿರುವುದು ಪರಿಶೀಲನೆ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ಬಂದಿದೆ. ಅವರ ಡಿಎನ್ಎ ಮಾದರಿ ತೆಗೆದುಕೊಳ್ಳಲಾಗಿದೆ. ವರದಿ ಬಂದ ಮೇಲೆ ಆ ಬೆರಳು ಅವರದೇ..? ಅಥವಾ ಬೇರೆಯವರದ್ದೋ ಎಂಬುದು ಗೊತ್ತಾಗುತ್ತದೆ.

ಚಿರಂಜೀವಿ ಪುತ್ರಿ ಶ್ರೀಜಾ ಮೊದಲ ಪತಿ ಮೃತ್ಯು..ನಟಿ ಶ್ರೀರೆಡ್ಡಿ ಪೋಸ್ಟ್​ ವೈರಲ್​..!

Share This Article

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…

ತೂಕ ಇಳಿಕೆಗೆ ನಂಬರ್​ 1 ಹಣ್ಣು! ಇದನ್ನು ತಿಂದರೆ ಸಾಕು ಬೆಣ್ಣೆಯಂತೆ ಕರಗಿ ಹೋಗುತ್ತದೆ ಬೊಜ್ಜು

ಎಷ್ಟೇ ಪ್ರಯತ್ನಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಒಂದು ಹಣ್ಣನ್ನು ತಿಂದರೆ…