ಆರ್ಥಿಕ ಸಾಕ್ಷರತಾ ಜಾಗೃತಿ

New Project (14)
Published on

ಪೆರ್ಲ: ಎಣ್ಮಕಜೆ ಗ್ರಾಪಂ ಸಾಂತ್ವನಂ ಬಡ್ಸ್ ಶಾಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಕಾಸರಗೋಡು ಲೀಡ್ ಬ್ಯಾಂಕ್ ನೇತೃತ್ವದಲ್ಲಿ ಕ್ಷೇತ್ರಮಟ್ಟದ ಆರ್ಥಿಕ ಸಾಕ್ಷರತಾ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ರಿಸರ್ವ್ ಬ್ಯಾಂಕ್ ಡಿಜಿಎಂ ಕೆ.ಬಿ.ಶ್ರೀಕುಮಾರ್ ಉದ್ಘಾಟಿಸಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ನಂಬಾರ್ಡ್ ಡಿಡಿಎಂ ಶರೋನ್‌ವಾಸ್, ಆರ್‌ಬಿಐ ಎಲ್‌ಡಿಒ ಶ್ಯಾಮ್ ಸುಂದರ್, ಲೀಡ್ ಜಿಲ್ಲಾ ವ್ಯವಸ್ಥಾಪಕ ಎಸ್.ತಿಪ್ಪೇಶ್ ಭಾಗವಹಿಸಿದ್ದರು.

ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಬಿಜೇಶ್, ಕೆನರಾ ಬ್ಯಾಂಕ್ ಡಿಎಂಎಲ್ ಸೋಮಶೇಖರನ್ ನಾಯಕ್, ಗ್ರಾಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಗ್ರಾಪಂ ಸದಸ್ಯ ನರಸಿಂಹ ಪೂಜಾರಿ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಬಡ್ಸ್ ಶಾಲಾ ನಿರ್ವಹಣಾ ಕಾರ್ಯನಿರ್ವಾಹಕ ಸದಸ್ಯ ರಾಜಾ ರಾಮ್ ಶುಭ ಹಾರೈಸಿದರು. ಸಿಎಫ್‌ಎಲ್ ಸಂಯೋಜಕ ಕೆ.ಪಿ.ಲಿನ್ಸೆ, ಎಫ್‌ಎಲ್‌ಸಿ ಕೌನ್ಸಿಲರ್ ಸುಬ್ರಹ್ಮಣ್ಯ ಶೆಣೈ ತರಗತಿ ನಡೆಸಿದರು.

ಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರಿಸಲಾಯಿತು. ಸಾಂತ್ವನಂ ಬಡ್ಸ್ ಶಾಲೆ ಪ್ರಾಂಶುಪಾಲೆ ಕೆ.ಮರಿಯಂಬಿ ವಂದಿಸಿದರು. ನಾಣ್ಯ ಮೇಳ ಆಯೋಜಿಸಲಾಗಿತ್ತು. ಜಿಲ್ಲೆಯ ಎಫ್.ಎಲ್.ಸಿ.ಸಿ.ಎಫ್.ಎಲ್ ಪ್ರತಿನಿಧಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net